ನವದೆಹಲಿ: ದಕ್ಷಿಣ ಕೊರಿಯಾ ಮತ್ತು ಉತ್ತರ ಪ್ರದೇಶದ ಅಯೋಧ್ಯೆ ನಗರವು ಪ್ರಮುಖ ಐತಿಹಾಸಿಕ ಸಂಬಂಧಗಳನ್ನು ಹಂಚಿಕೊಂಡಿದೆ ಎಂದು ದಕ್ಷಿಣ ಕೊರಿಯಾದ ಭಾರತದ ರಾಯಭಾರಿ ಶಿನ್ ಬೊಂಗ್ಕಿಲ್ ಸೋಮವಾರ ಹೇಳಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಕೊರಿಯಾದ ರಾಯಭಾರಿ, ದೇಶದ ಪ್ರಾಚೀನ ಇತಿಹಾಸ ಪುಸ್ತಕದ ಪ್ರಕಾರ ಕೊರಿಯಾದ ರಾಜ ಕಿಮ್ ಸುರೋನನ್ನು ಮದುವೆಯಾದ ಭಾರತೀಯ ರಾಜಕುಮಾರಿಯ ಬಗ್ಗೆ ಅವರು ಉಲ್ಲೇಖಿಸಿದ್ದಾರೆ.
“ಅಯೋಧ್ಯೆಗೆ ಕೊರಿಯಾದೊಂದಿಗೆ ಪ್ರಮುಖ ಸಂಬಂಧವಿದೆ. ಕೊರಿಯಾದ ಪ್ರಾಚೀನ ಇತಿಹಾಸ ಪುಸ್ತಕದಲ್ಲಿ, ಅಯೋಧ್ಯೆಯ ರಾಜಕುಮಾರಿಯು ಕೊರಿಯಾದ ರಾಜ ಕಿಮ್ ಸುರೋಳನ್ನು ಮದುವೆಯಾದಳೆಂದು ಬರೆಯಲಾಗಿದೆ, ”ಎಂದು ಅವರು ಹೇಳಿದ್ದಾರೆ.
“ರಾಜನ ಸಮಾಧಿಯಲ್ಲಿ ನಡೆಸಲಾದ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳಲ್ಲಿ, ಅಯೋಧ್ಯೆಗೆ ಸೇರಿದ ಕಲಾಕೃತಿಗಳು ಕಂಡುಬಂದಿವೆ” ಎಂದು ಅವರು ಹೇಳಿದರು.
ಅಯೋಧ್ಯೆಯ ರಾಮ ದೇವಾಲಯದ ಭೂಮಿ ಪೂಜೆಯ ಸಮಾರಂಭಕ್ಕು ಒಂದು ದಿನ ಮೊದಲು ಬೊಂಗ್ಕಿಲ್ ಅವರ ಹೇಳಿಕೆಗಳು ಬಂದಿವೆ.
2018ರಲ್ಲಿ ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜಂಗ್-ಸೂಕ್ ಅವರು ಅಯೋಧ್ಯೆಯಲ್ಲಿ ದೀಪಾವಳಿಯನ್ನು ಆಚರಿಸಿದರು, ಅಲ್ಲಿ ಅವರು ಸರಯು ನದಿಯ ಘಟ್ಟಗಳ ಮೇಲೆ ಮೂರು ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದರು.
Ayodhya has important relations with Korea. In Korea’s ancient history book, it’s written that a princess from Ayodhya married a Korean king Kim Suro. In archaeological findings from king’s tomb, artefacts belonging to Ayodhya have been found: Shin Bong-kil, South Korean Envoy pic.twitter.com/vW5RoeBO87
— ANI (@ANI) August 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.