ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆಯೂ ಕಳೆದೊಂದು ವಾರದಿಂದೀಚೆಗೆ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ 5.67% ಏರಿಕೆಯಾಗಿದ್ದು ಭರವಸೆ ಹೆಚ್ಚಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಕೊರೋನಾ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಪ್ರತಿ ನಿತ್ಯ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಕೋವಿಡ್-19 ನಿಂದ ಚೇತರಿಸಿಕೊಂಡವರ ಪ್ರಮಾಣ 5.67% ರಷ್ಟು ಹೆಚ್ಚಾಗುವ ಮೂಲಕ 42.81% ಕ್ಕೆ ಏರಿಕೆಯಾಗಿದೆ ಎಂದಿದ್ದಾರೆ.
ಟ್ವಿಟ್ ಮಾಡಿರುವ ಸುಧಾಕರ್, “ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಕೊರೊನಾ ಚೇತರಿಕೆ ದರ ಶೇ.5.67%ರಷ್ಟು ಏರಿಕೆ ಕಂಡಿದ್ದು ಬೆಂಗಳೂರು ನಗರದಲ್ಲಿ ಶೇ.9.17%ರಷ್ಟು ಏರಿಕೆ ಕಂಡಿದೆ. ನೆನ್ನೆ ಸಂಜೆಯ ವೇಳೆಗೆ ರಾಜ್ಯದ ಚೇತರಿಕೆ ದರ ಶೇ.42 81% ರಷ್ಟಿದ್ದು ಬೆಂಗಳೂರಿನಲ್ಲಿ ಶೇ.35.14% ಚೇತರಿಕೆ ದರ ದಾಖಲಾಗಿದೆ” ಎಂದಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಒಂದೇ ಸಮನೆ ಏರಿಕೆಯಾಗುತ್ತಿದ್ದ ಕೊರೋನಾ ಸೋಂಕಿನ ನಡುವೆಯೂ, ರೋಗಿಗಳು ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವುದು ರಾಜ್ಯದ ಜನರಲ್ಲಿ ಮತ್ತಷ್ಟು ಭರವಸೆ ಮೂಡಿಸಿದೆ ಎನ್ನಬಹುದಾಗಿದೆ. ಸರ್ಕಾರ ಕೈಗೊಂಡ ಸೂಕ್ತ ಪರಿಣಾಮಕಾರಿ ಚಿಕಿತ್ಸಾ ಕ್ರಮದಿಂದ ಮತ್ತು ಮುಂಜಾಗ್ರತಾ ನಿಯಮಗಳ ಕಾರಣದಿಂದಾಗಿ ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂಬುದು ನಿಸ್ಸಂಶಯ.
ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಕೊರೊನಾ ಚೇತರಿಕೆ ದರ ಶೇ.5.67%ರಷ್ಟು ಏರಿಕೆ ಕಂಡಿದ್ದು ಬೆಂಗಳೂರು ನಗರದಲ್ಲಿ ಶೇ.9.17%ರಷ್ಟು ಏರಿಕೆ ಕಂಡಿದೆ. ನೆನ್ನೆ ಸಂಜೆಯ ವೇಳೆಗೆ ರಾಜ್ಯದ ಚೇತರಿಕೆ ದರ ಶೇ.42 81% ರಷ್ಟಿದ್ದು ಬೆಂಗಳೂರಿನಲ್ಲಿ ಶೇ.35.14% ಚೇತರಿಕೆ ದರ ದಾಖಲಾಗಿದೆ.@CMofKarnataka pic.twitter.com/xE0ERPsDjz
— Dr Sudhakar K (@mla_sudhakar) August 3, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.