ಲಂಡನ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ ಯುನೈಟೆಡ್ ಕಿಂಗ್ಡಮ್ ನಾಣ್ಯವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅಲ್ಪಸಂಖ್ಯಾತರ ಕೊಡುಗೆಗಳನ್ನು ಗುರುತಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯುಕೆ ಖಜಾನೆ ಶನಿವಾರ ಪ್ರಕಟಿಸಿದೆ. 1987 ರಿಂದ ಭಾರತದ ಕರೆನ್ಸಿಯಲ್ಲಿರುವ ಮಹಾತ್ಮ ಗಾಂಧೀಜಿ, ಬ್ರಿಟಿಷ್ ಕರೆನ್ಸಿಯ ನಾಣ್ಯದಲ್ಲಿ ಕಾಣಿಸಿಕೊಳ್ಳುವ ಮೊದಲ ಬಿಳಿಯಯೇತರ ವ್ಯಕ್ತಿಯಾಗಲಿದ್ದಾರೆ.
ರಾಯಲ್ ಮಿಂಟ್ ಸಲಹಾ ಸಮಿತಿಯು ಮಹಾತ್ಮ ಗಾಂಧಿಯನ್ನು ಒಳಗೊಂಡ ನಾಣ್ಯವನ್ನು ರಚಿಸುವತ್ತ ಕಾರ್ಯೋನ್ಮುಖಗೊಂಡಿದೆ. ನಾಣ್ಯಗಳಿಗೆ ವಿಷಯಗಳು ಮತ್ತು ವಿನ್ಯಾಸಗಳನ್ನು ಶಿಫಾರಸ್ಸು ಮಾಡುವ ಕಾರ್ಯವನ್ನು ಯುಕೆಯಲ್ಲಿ ರಾಯಲ್ ಮಿಂಟ್ ಸಲಹಾ ಸಮಿತಿಯು ಮಾಡುತ್ತದೆ.
ಬ್ರಿಟಿಷ್ ಹಣಕಾಸು ಸಚಿವ ರಿಷಿ ಸುನಕ್ ಅವರು ರಾಯಲ್ ಮಿಂಟ್ ಸಲಹಾ ಸಮಿತಿಗೆ (ಆರ್ಎಂಎಸಿ) ಪತ್ರ ಬರೆದು, ಯುಕೆ ನಾಣ್ಯಗಳ ಮೇಲೆ BAME ಸಮುದಾಯಗಳ ವ್ಯಕ್ತಿಗಳ ಮಾನ್ಯತೆಯನ್ನು ಮುಂದುವರಿಸುವಂತೆ ಕೇಳಿಕೊಂಡಿದ್ದಾರೆ ಎಂದು ಯುಕೆ ಖಜಾನೆ ತಿಳಿಸಿದೆ.
ಕಪ್ಪು, ಏಷ್ಯನ್ ಮತ್ತು ಅಲ್ಪಸಂಖ್ಯಾತ ಜನಾಂಗೀಯ (BAME) ಸಮುದಾಯಗಳಿಗೆ ಸಹಾಯ ಮಾಡಲು ಮತ್ತು ಜನಾಂಗೀಯ ವೈವಿಧ್ಯತೆಯನ್ನು ಬೆಂಬಲಿಸಲು ಹೂಡಿಕೆ ಮಾಡಲು ಅನೇಕ ಸಂಸ್ಥೆಗಳು ಯುಕೆಯಲ್ಲಿ ಉಪಕ್ರಮಗಳನ್ನು ಕೈಗೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.