ಉಡುಪಿ: ಕಳೆದ ಮಾರ್ಚ್ ತಿಂಗಳಿನಲ್ಲಿ ಭಾರತಕ್ಕಾಗಮಿಸಿ, ಆ ಬಳಿಕ ಕೊರೋನಾ ಸೋಂಕಿನ ಕಾರಣದಿಂದಾಗಿ ತನ್ನ ದೇಶಕ್ಕೆ ಮರಳಲಾಗದೆ ಉಡುಪಿಯ ಬೈಂದೂರಿನಲ್ಲಿ ಹಳ್ಳಿ ಬದುಕು, ಭಾರತೀಯ ಸಂಸ್ಕೃತಿಗೆ ಒಗ್ಗಿಕೊಂಡು ಭಾರತೀಯ ಆಚಾರ ವಿಚಾರಗಳಿಗೆ ಮಾರು ಹೋಗಿದ್ದಾರೆ ಸ್ಪೇನ್ ದೇಶದ ಯುವತಿ ತೆರೆಸಾ.
ಅಂದ ಹಾಗೆ ಈಕೆ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದು, ಉಡುಪಿಗೆ ಬಂದಿಳಿದಿದ್ದರು. ಆದರೆ ಆ ಬಳಿಕ ಕೊರೋನಾ ಸೋಂಕಿನ ಕಾರಣಕ್ಕೆ ಲಾಕ್ಡೌನ್ ಆರಂಭವಾಗಿದ್ದು, ವಿದೇಶಿ ವಿಮಾನಯಾನ ಸೇವೆಗಳು ಸ್ಥಗಿತವಾಗಿತ್ತು. ಈ ಸಂದರ್ಭದಲ್ಲಿ ತನ್ನ ತವರಿಗೆ ಮರಳಲಾಗದೆ ಸ್ನೇಹಿತ ಕೃಷ್ಣ ಪೂಜಾರಿ ಎಂಬವರ ಮನೆಯಲ್ಲಿ ಈ ಯುವತಿ ಆಶ್ರಯ ಪಡೆದಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದಲೂ ಇವರ ಮನೆಯಲ್ಲೇ ವಾಸವಾಗಿರುವ ತೆರೆಸಾ ಸದ್ಯ ಭಾರತದ ಕೃಷಿ ಪದ್ಧತಿ, ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಜೊತೆಗೆ ಕನ್ನಡವನ್ನೂ ಕಲಿತಿದ್ದಾರೆ.
ಇಲ್ಲಿನ ಭಾಷೆ, ಜನ, ಆಹಾರ ಸಂಸ್ಕೃತಿಗೂ ಒಗ್ಗಿಕೊಂಡಿರುವ ತೆರೆಸಾ ಮನೆ ಮಗಳಂತಾಗಿದ್ದಾರೆ. ಜೊತೆಗೆ ಕೇವಲ ನಾಲ್ಕೇ ತಿಂಗಳಲ್ಲಿ ಮನೆ ಮಂದಿಯ ಜೊತೆ ಸೇರಿ ಗೊಬ್ಬರ ಹೊರುವುದು, ದನಗಳ ಕೆಲಸ, ಹಾಲು ಕರೆಯುವುದು, ರಂಗೋಲಿ ಹಾಕುವುದು, ಗದ್ದೆ ಕೆಲಸಗಳನ್ನೂ ಕಲಿತು ಇತರರಿಗೂ ಮಾದರಿಯಾಗಿದ್ದಾರೆ. ಸದ್ಯ ತೆರೆಸಾಗೆ ಉಡುಪಿಯು ಬದುಕಿನ ಪಾಠವನ್ನು, ಪ್ರಕೃತಿಯ ಜೊತೆಗೆ ಬೆರೆಯುವುದನ್ನು ಕಲಿಸಿಕೊಟ್ಟಿದ್ದು, ಭಾರತದಲ್ಲೇ ಉಳಿಯಬೇಕು ಎಂಬ ಆಸೆಯನ್ನೂ ಹುಟ್ಟಿಸಿದೆಯಂತೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.