ನವದೆಹಲಿ: ಸಕಾರಾತ್ಮಕ ಬೆಳವಣಿಗೆಯೊಂದರಲ್ಲಿ, ಜುಲೈನಲ್ಲಿ ಯುನೈಟೆಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ವಹಿವಾಟು 1.49 ಬಿಲಿಯನ್ ತಲುಪಿದೆ, ಒಟ್ಟು ವಹಿವಾಟಿನ ಮೌಲ್ಯವು 2.9 ಲಕ್ಷ ಕೋಟಿ ರೂ.ಗಳನ್ನು ಮುಟ್ಟಿದೆ ಎಂದು ವರದಿಗಳು ತಿಳಿಸಿವೆ.
ರಾಷ್ಟ್ರದಲ್ಲಿ ಡಿಜಿಟಲ್ ವಹಿವಾಟುಗಳ ಅಳವಡಿಸಿಕೊಳ್ಳುವಿಕೆ ಹೆಚ್ಚಾಗುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಸಾಂಕ್ರಾಮಿಕದ ಕಾರಣದಿಂದಲೂ ಜನರ ಪಾವತಿ ನಡವಳಿಕೆಯು ಬದಲಾವಣೆ ಆಗಿದೆ ಎಂಬುದಾಗಿಯೂ ಅನೇಕ ತಜ್ಞರು ಅಭಿಪ್ರಾಯಿಸಿದ್ದಾರೆ.
ವರದಿಗಳ ಪ್ರಕಾರ, ಯುಪಿಐ ಮೂಲಕ ನಡೆಸಲಾದ ವಹಿವಾಟುಗಳು ಜೂನ್ ತಿಂಗಳಲ್ಲಿಯೂ ದಾಖಲೆಯನ್ನು ಬರೆದಿದ್ದವು. ಜೂನ್ನಲ್ಲಿ ನಡೆದ ಒಟ್ಟು ವಹಿವಾಟಿನ ಸಂಖ್ಯೆ 1.34 ಬಿಲಿಯನ್ ಆಗಿದ್ದು, ಇದರ ಒಟ್ಟು ಮೌಲ್ಯವು 2.61 ಲಕ್ಷ ಕೋಟಿ ರೂ.ಆಗಿತ್ತು.
ಅಲ್ಲದೇ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ನಿರ್ವಹಿಸುವ ಚಿಲ್ಲರೆ ಪಾವತಿಗಳ ಇತರ ಡಿಜಿಟಲ್ ವಿಧಾನಗಳ ಮೂಲಕ ನಡೆಸಲಾದ ವಹಿವಾಟುಗಳು ಸಹ ಏರಿಕೆ ಕಂಡಿವೆ. ಕೋವಿಡ್-19 ಹೊಡೆತದಿಂದ ಇವು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ.
ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್ಇಟಿಸಿ) ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್ಗಳ ಮೂಲಕ ಟೋಲ್ ಸಂಗ್ರಹವು ಜೂನ್ನಲ್ಲಿ 1623 ಕೋಟಿ ರೂ.ಗಳ 87 ಮಿಲಿಯನ್ ವಹಿವಾಟುಗಳನ್ನು ದಾಖಲಿಸಿದೆ. ಇದು ಏಪ್ರಿಲ್ನಲ್ಲಿ ದಾಖಲಾದ 10 ಮಿಲಿಯನ್ ವಹಿವಾಟಿನ ಎಂಟು ಪಟ್ಟು ಹೆಚ್ಚು. ಫೆಬ್ರವರಿಯಲ್ಲಿ, ಕೋವಿಡ್-19 ಭಾರತದಲ್ಲಿ ಪೂರ್ಣ ಮಟ್ಟಕ್ಕೆ ತಲುಪುವ ಮೊದಲು, ದಾಖಲಾದ ವಹಿವಾಟುಗಳು 110 ಮಿಲಿಯನ್ ಆಗಿದ್ದು, ಸಂಗ್ರಹಿಸಿದ ಟೋಲ್ ಮೊತ್ತವು ಸಾರ್ವಕಾಲಿಕ ಗರಿಷ್ಠ 1843 ಕೋಟಿ ರೂ.ಆಗಿತ್ತು.
ಬಿಬಿಪಿಎಸ್ ಮತ್ತು ಐಎಂಪಿಎಸ್ ವಿಧಾನಗಳ ಮೂಲಕ ಡಿಜಿಟಲ್ ಪಾವತಿಗಳ ವಹಿವಾಟುಗಳು ಸಹ ಆರೋಗ್ಯಕರ ಬೆಳವಣಿಗೆಯನ್ನು ವರದಿ ಮಾಡಿವೆ. ಜುಲೈನಲ್ಲಿ ಗರಿಷ್ಠ 3707 ಕೋಟಿ ರೂ.ಗಳ 2016 ಮಿಲಿಯನ್ ವಹಿವಾಟುಗಳು ನಡೆದಿವೆ. ಇದು ಫೆಬ್ರವರಿಯಲ್ಲಿ ನಡೆದ 1957 ಕೋಟಿ ರೂ ಮೌಲ್ಯದ 14.92 ಮಿಲಿಯನ್ ವಹಿವಾಟುಗಳಿಗಿಂತ ಶೇಕಡಾ 25ರಷ್ಟು ಹೆಚ್ಚು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.