ನವದೆಹಲಿ: ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಸಲುವಾಗಿ ಭಾರತ ಮತ್ತು ಚೀನಾ ಇಂದು ಚೀನಾ ಬದಿಯ ವಾಸ್ತವ ಗಡಿ ರೇಖೆಯ ಸಮೀಪದ ಮೊಲ್ಡೋ ಪ್ರದೇಶದಲ್ಲಿ ಕಮಾಂಡರ್ ಮಟ್ಟದ ಸಭೆಯನ್ನು ನಡೆಸುತ್ತಿವೆ. ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭಗೊಂಡಿದೆ.
“ಭಾರತ ಮತ್ತು ಚೀನಾ ಐದನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳನ್ನು ಭಾನುವಾರ ನಡೆಸಲು ಸಜ್ಜಾಗಿದ್ದು, ಪ್ಯಾಂಗೊಂಗ್ ತ್ಸೊ ಪ್ರದೇಶ ಮತ್ತು ಗೊಗ್ರಾಗಳಲ್ಲಿ ಕಾರ್ಯ ವಿಧಾನಗಳನ್ನು ರೂಪಿಸಲು ಸಭೆಯಲ್ಲಿ ಒತ್ತು ನೀಡಲಾಗುತ್ತದೆ. ಈ ಪ್ರದೇಶಗಳಲ್ಲಿ ಉಭಯ ದೇಶಗಳ ಸೈನ್ಯದ ಹಿಂಪಡೆಯುವಿಕೆ ನಡೆದಿಲ್ಲ. 5 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಚೀನಾದ ಕಡೆಯ ಮೊಲ್ಡೊದಲ್ಲಿ ನಡೆಯಲಿದೆ” ಎಂದು ಮೂಲಗಳು ತಿಳಿಸಿವೆ.
ಗಾಲ್ವಾನ್ ಕಣಿವೆಯಲ್ಲಿ ಜೂನ್ನಲ್ಲಿ ಉಭಯ ರಾಷ್ಟ್ರಗಳ ನಡುವೆ ನಡೆದ ಘರ್ಷಣೆಯ ನಂತರ ನಡೆಯುತ್ತಿರುವ ಐದನೇ ಸುತ್ತಿನ ಮಾತುಕತೆ ಇದಾಗಿದೆ. ಉದ್ವಿಗ್ನತೆಯನ್ನು ಕಡಿಮೆ ಮಾಡುವ ಸಲುವಾಗಿ ಕಮಾಂಡರ್ ಮಟ್ಟದ ಮಾತುಕತೆಗಳು ನಿರಂತರ ನಡೆಯುತ್ತಿವೆ.
ಗಡಿಯಲ್ಲಿ ಕೆಲವು ಮಟ್ಟಿಗೆ ಪ್ರಗತಿ ಸಾಧಿಸಿದ್ದರೂ ಪೂರ್ವ ಲಡಾಕ್ನಲ್ಲಿ ಸೈನ್ಯವನ್ನು ಹಿಂಪಡೆಯುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಭಾರತ ಗುರುವಾರ ಹೇಳಿಕೆ ನೀಡಿತ್ತು. ಉಭಯ ದೇಶಗಳ ಮುಂಚೂಣಿ ಪಡೆಗಳು ತಮ್ಮ ಗಡಿಯುದ್ದಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿವೆ ಎಂಬ ಚೀನಾದ ಹೇಳಿಕೆಗೆ ಇದು ವಿರುದ್ಧವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.