ನವದೆಹಲಿ: ಸಹೋದರತ್ವದ ಸಂಕೇತವಾದ ರಕ್ಷಾ ಬಂಧನದಂದು ಪ್ರಧಾನಿ ಮೋದಿ ಅವರಿಗೆ ದೇಶದ ಅದೆಷ್ಟೋ ಮಹಿಳೆಯರು ರಕ್ಷೆ ಕಟ್ಟಿ ಶುಭಾಶಯ ತಿಳಿಸುತ್ತಾರೆ. ಅದರಂತೆ ಪಾಕಿಸ್ಥಾನ ಮೂಲದ ಮಹಿಳೆ ಖಮರ್ ಮೊಹ್ಸಿನ್ ಶೇಕ್ ಪೋಸ್ಟ್ ಮೂಲಕ ಮೋದಿ ಅವರಿಗೆ ರಕ್ಷೆಯನ್ನು ಕಳುಹಿಸುವ ಮೂಲಕ, ರಕ್ಷಾ ಬಂಧನದ ಶುಭಾಶಯ ತಿಳಿಸಿದ್ದಾರೆ.
ಕೊರೋನಾ ಕಾರಣದಿಂದಾಗಿ ದೆಹಲಿಗೆ ಆಗಮಿಸಿ ರಕ್ಷೆ ಕಟ್ಟುವುದು ಅಸಾಧ್ಯವಾಗಿದ್ದು, ಆದ್ದರಿಂದ ಪೋಸ್ಟ್ ಮೂಲಕ ರಕ್ಷೆ ಕಳುಹಿಸಿದ್ದಾಗಿಯೂ ಮಹಿಳೆ ಮಾಹಿತಿ ನೀಡಿದ್ದಾರೆ.
ಮೋದಿ ಅವರಿಗೆ 25 ನೇಯ ವರ್ಷದ ರಕ್ಷೆಯನ್ನು ಇವರು ಕಟ್ಟುತ್ತಿದ್ದಾರೆ. ಇವರು ಪ್ರಸ್ತುತ ಅಹಮದಾಬಾದ್ನಲ್ಲಿ ವಾಸ ಮಾಡುತ್ತಿದ್ದಾರೆ. ಮದುವೆಯಾದ ಬಳಿಕ ತಾನು ಗುಜರಾತ್ನಲ್ಲಿ ವಾಸವಿರುವುದಾಗಿಯೂ ಅವರು ಹೇಳಿದ್ದಾರೆ. ಕಳೆದ 35 ವರ್ಷಗಳಿಂದಲೂ ಮೋದಿ ಅವರ ಪರಿಚಯ ನನಗಿದೆ, ಮೋದಿ ಅವರೂ ನನ್ನನ್ನು ಸಹೋದರಿ ಎಂಬುದಾಗಿಯೇ ಸಂಬೋಧಿಸುತ್ತಾರೆ ಎಂದು ಖಮರ್ ತಿಳಿಸಿದ್ದಾರೆ. ನನಗೆ ಒಡಹುಟ್ಟಿದ ಸಹೋದರನಿಲ್ಲ. ತಾನು ಮೋದಿ ಅವರನ್ನು ಸಹೋದರನೆಂದೇ ಪರಿಗಣಿಸಿ ರಕ್ಷೆ ಕಟ್ಟುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ತಾನವರಿಗೆ ರಕ್ಷೆ ಕಟ್ಟಿದ್ದೆ. ಈಗ ಪ್ರಧಾನಿಯಾಗಿದ್ದಾರೆ. ದೆಹಲಿಗೇ ತೆರಳಿ ರಕ್ಷೆ ಕಟ್ಟಿ ಶುಭಾಶಯ ತಿಳಿಸಬೇಕು ಎಂಬ ಬಯಕೆ ಇತ್ತು. ಆದರೆ ಕೊರೋನಾ ಕಾರಣದಿಂದಾಗಿ ಆ ಆಸೆ ನೆರವೇರದೆ, ಪೋಸ್ಟ್ನಲ್ಲಿಯೇ ರಕ್ಷೆ ಕಳುಹಿಸಿ ಶುಭಾಶಯ ತಿಳಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.