ಜಮ್ಮು: ಜಮ್ಮು ಮತ್ತು ಕಾಶ್ಮೀರದ ಹಿರಾ ನಗರ್ ವಲಯದ ಗಡಿನಿಯಂತ್ರಣ ರೇಖೆಯ ಸಮೀಪ ಪಾಕಿಸ್ಥಾನದ ಡ್ರೋನ್ ಒಂದು ಹಾರಾಟ ನಡೆಸುತ್ತಿರುವುದನ್ನು ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ನ 19ನೇ ಬೆಟಾಲಿಯನ್ ಪತ್ತೆಮಾಡಿದೆ. ಬಳಿಕ ಇದನ್ನು ಗುಂಡು ಹಾರಿಸಿ ಹೊಡೆದುರುಳಿಸಲಾಗಿದೆ.
ವರದಿಗಳ ಪ್ರಕಾರ, ಬಿಎಸ್ಎಫ್ ಸಿಬ್ಬಂದಿ ಶುಕ್ರವಾರ ರಾತ್ರಿ 10: 30 ರ ಸುಮಾರಿಗೆ ಗಡಿ ಪೋಸ್ಟ್ ಬಳಿ ಡ್ರೋನ್ ಅನ್ನು ಗಮನಿಸಿದರು, ನಂತರ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು.
ಈ ಹಿಂದೆ ಜೂನ್ ಆರಂಭಲ್ಲೂ, ಜಮ್ಮು ಮತ್ತು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್ ಸಿಬ್ಬಂದಿ ಪಾಕಿಸ್ಥಾನದ ಡ್ರೋನ್ ಅನ್ನು ಹೊಡೆದುರುಳಿಸಿದ್ದರು, ಈ ಮೂಲಕ ಗಡಿಯುದ್ದಕ್ಕೂ ಶಸ್ತ್ರಾಸ್ತ್ರ ಮತ್ತು ಅಕ್ರಮ ವಸ್ತುಗಳನ್ನು ತಂದು ಹಾಕುವ ಪಾಕಿಸ್ಥಾನಿ ಏಜೆನ್ಸಿಗಳ ಪ್ರಯತ್ನವನ್ನು ವಿಫಲಗೊಳಿಸಿದ್ದರು. ವರದಿಗಳ ಪ್ರಕಾರ ನಿನ್ನೆ, ಕತುವಾ ಜಿಲ್ಲೆಯ ಹಿರಾನಗರ ತಾಲ್ಲೂಕಿನ ರಾತುವಾ ಗ್ರಾಮದಲ್ಲಿರುವ ಫಾರ್ವರ್ಡ್ ಪೋಸ್ಟ್ನಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ.
19 ಬೆಟಾಲಿಯನ್ನ ಬಿಎಸ್ಎಫ್ನ ಪ್ಯಾಟ್ರೋಲ್ ತಂಡ ಹಿರಾನಗರ ಸೆಕ್ಟರ್ನ ರಾತುವಾ ಪ್ರದೇಶದಲ್ಲಿ ಪಾಕಿಸ್ಥಾನದ ಡ್ರೋನ್ ಹಾರಾಟವನ್ನು ಗುರುತಿಸಿ ಅದರ ಮೇಲೆ ಎಂಟು ಸುತ್ತು ಗುಂಡು ಹಾರಿಸಿ, ಅದನ್ನು ಹೊಡೆದುರುಳಿಸಿದೆ. ತಂಡವು 1 ಎಂ -4 ಯುಎಸ್ ನಿರ್ಮಿತ ರೈಫಲ್, 2 ಮ್ಯಾಗಜೀನ್ಗಳು, 60 ಸುತ್ತು ಗುಂಡುಗಳು ಮತ್ತು 7 ಗ್ರೆನೇಡ್ಗಳನ್ನು ವಶಪಡಿಸಿಕೊಂಡಿದೆ.
ಕಾಶ್ಮೀರದಲ್ಲಿ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಸಂಘಟನೆಯ ಬಲವನ್ನು ಹೆಚ್ಚಿಸುವ ಸಲುವಾಗಿ, ಪಾಕಿಸ್ಥಾನದ ಭಯೋತ್ಪಾದಕ ಸಂಸ್ಥೆಗಳು ಗಡಿಯುದ್ದಕ್ಕೂ ಇಂತಹ ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಗಡಿಯುದ್ದಕ್ಕೂ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಪಾಕಿಸ್ಥಾನಿ ಏಜೆನ್ಸಿಗಳು ಇಂತಹ ಹಲವಾರು ಪ್ರಯತ್ನಗಳನ್ನು ಈ ಹಿಂದೆ ನಡೆಸಿವೆ ಮತ್ತು ಈ ಪ್ರಯತ್ನಗಳನ್ನು ಭಾರತೀಯ ಭದ್ರತಾ ಪಡೆಗಳು ವಿಫಲಗೊಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.