ನವದೆಹಲಿ: ಚೀನಾದ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳಿಗೆ ನಿಷೇಧ ಹೇರಿದ ಕೆಲ ದಿನಗಳ ನಂತರ, ಈಗ ಚೀನಾದ ಕಲರ್ ಟೆಲಿವಿಷನ್ ಸೆಟ್ಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ನಿರ್ಬಂಧ ಹೇರಿದೆ. ಈ ಕ್ರಮವು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಇದು ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ‘ವೋಕಲ್ ಫಾರ್ ಲೋಕಲ್’ ಕರೆಗೆ ಅನುಗುಣವಾಗಿದೆ.
ವರದಿಗಳ ಪ್ರಕಾರ, ನಿರ್ಬಂಧಗಳನ್ನು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್ಟಿ) ಗುರುವಾರ ಪ್ರಕಟಿಸಿದೆ. ಕಲರ್ ಟೆಲಿವಿಷನ್ ಸೆಟ್ಗಳ ಆಮದು ನೀತಿಯನ್ನು “ಮುಕ್ತ” ದಿಂದ “ನಿರ್ಬಂಧ”ದತ್ತ ಎಂದು ತಿದ್ದುಪಡಿ ಮಾಡಲಾಗಿದೆ ಎಂದು ಡಿಜಿಎಫ್ಟಿ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದರರ್ಥ ಕೆಲವು ವಿಭಾಗಗಳಲ್ಲಿ ಟಿವಿಗಳನ್ನು ಆಮದು ಮಾಡಿಕೊಳ್ಳಲು ಈಗ ಸರ್ಕಾರದಿಂದ ಪರವಾನಗಿ ಬೇಕಾಗುತ್ತದೆ.
“ಕಲರ್ ಟೆಲಿವಿಷನ್ ಸೆಟ್ಗಳ ಆಮದು ನೀತಿಯನ್ನು ‘ಮುಕ್ತ’ ದಿಂದ ‘ನಿರ್ಬಂಧ’ ಕ್ಕೆ ತಿದ್ದುಪಡಿ ಮಾಡಲಾಗಿದೆ” ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್ಟಿ) ಅಧಿಸೂಚನೆಯಲ್ಲಿ ತಿಳಿಸಿದೆ. ಇದು ಪರವಾನಗಿ ನೀಡುವ ಕಾರ್ಯವಿಧಾನವನ್ನು ಪ್ರತ್ಯೇಕವಾಗಿ ಹೊರಡಿಸುತ್ತದೆ ಎಂದು ಹೇಳಿದೆ.
‘ನಿರ್ಬಂಧಿತ’ ಸರಕುಗಳನ್ನು ಆಮದು ಮಾಡಿಕೊಳ್ಳುವ ಅಧಿಕಾರಕ್ಕಾಗಿ ಅರ್ಜಿ ಸಲ್ಲಿಸುವ ಆಮದುದಾರರಿಗೆ ನೈಜ ಬಳಕೆದಾರ ಷರತ್ತುಗಳು ಅನ್ವಯವಾಗುವುದಿಲ್ಲ. ಪರವಾನಗಿ ನೀಡುವ ವಿಧಾನವನ್ನು ಡಿಜಿಎಫ್ಟಿ ಪ್ರತ್ಯೇಕವಾಗಿ ನೀಡಲಿದೆ” ಎಂದು ಅಧಿಸೂಚನೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.