ನವದೆಹಲಿ: ಅನಿಷ್ಟ ಪದ್ಧತಿ ತ್ರಿವಳಿ ತಲಾಖ್ ವಿರುದ್ಧ ಕಳೆದ ವರ್ಷ ಜಾರಿಗೊಳಿಸಲಾದ ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019 ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ವರದಿಗಳ ಪ್ರಕಾರ, ಕಾನೂನು ಜಾರಿಯಾದ ಬಳಿಕ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಆಗಿದೆ.
ವರದಿಗಳ ಪ್ರಕಾರ, ಕಳೆದ ಒಂದು ವರ್ಷದಿಂದ ಅಂದರೆ ತ್ರಿವಳಿ ತಲಾಕ್ ಕಾಯ್ದೆ ಜಾರಿಯಾದ ಆಗಸ್ಟ್ 1, 2019ರ ಬಳಿಕ ದೇಶದಲ್ಲಿ ಕೇವಲ 1,039 ತ್ರಿವಳಿ ತಲಾಖ್ ಪ್ರಕರಣಗಳು ವರದಿಯಾಗಿದೆ. 1985ರಿಂದ 2019 ರವರೆಗೆ ದೇಶದಲ್ಲಿ ಬರೋಬ್ಬರಿ 3,82,964 ತ್ರಿವಳಿ ತಲಾಕ್ ಪ್ರಕರಣಗಳು ವರದಿಯಾಗಿದ್ದವು. ಅಂದರೆ ತಲಾ ವರ್ಷಕ್ಕೆ ಸುಮಾರು 11,264 ಪ್ರಕರಣಗಳು ದಾಖಲಾಗಿವೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, 1985 ರಿಂದ ಅಂದರೆ ಶಹಬಾನೋ ಪ್ರಕರಣ ಮುನ್ನಲೆಗೆ ಬಂದ ಬಳಿಕ ಉತ್ತರ ಪ್ರದೇಶವು ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿದೆ. 1985-2019ರ ಅವಧಿಯಲ್ಲಿಇಲ್ಲಿ 63,400 ಪ್ರಕರಣಗಳು ದಾಖಲಾಗಿವೆ. ಅಂದರೆ ವರ್ಷಕ್ಕೆ ಸರಾಸರಿ 1,865 ಪ್ರಕರಣಗಳು ದಾಖಲಾಗಿವೆ. ಯುಪಿ ಕಳೆದ ಒಂದು ವರ್ಷದಲ್ಲಿ ಇಂತಹ 281 ಪ್ರಕರಣಗಳನ್ನು ಮಾತ್ರ ವರದಿ ಮಾಡಿದೆ.
ಪಶ್ಚಿಮ ಬಂಗಾಳವು 1985 ರಿಂದೀಚೆಗೆ ಎರಡನೇ ಅತಿ ಹೆಚ್ಚು ಪ್ರಕರಣಗಳನ್ನು ಅಂದರೆ 51,800 ಪ್ರಕರಣಗಳನ್ನು ವರದಿ ಮಾಡಿದೆ. ವರ್ಷಕ್ಕೆ ಸರಾಸರಿ 1,523 ಪ್ರಕರಣವನ್ನು ದಾಖಲಿಸಿದೆ. ಆದರೆ ಕಳೆದ ಒಂದು ವರ್ಷದಲ್ಲಿ ರಾಜ್ಯವು ಕೇವಲ 201 ಪ್ರಕರಣಗಳನ್ನು ವರದಿ ಮಾಡಿದೆ.
1985-2019ರ ಅವಧಿಯಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶವು ತ್ರಿವಳಿ ತಲಾಖ್ ಪ್ರಕರಣಗಳಲ್ಲಿ 41,382 ರಷ್ಟನ್ನು ಹೊಂದಿದ್ದು, ಪ್ರತಿ ವರ್ಷ ಸರಾಸರಿ 1,217 ಪ್ರಕರಣಗಳು ಇಲ್ಲಿ ಕಂಡುಬಂದಿವೆ. ಆದರೂ, ಉಭಯ ರಾಜ್ಯಗಳು ಕಳೆದ ಒಂದು ವರ್ಷದಲ್ಲಿ ಕೇವಲ 203 ಪ್ರಕರಣಗಳನ್ನು ದಾಖಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.