ವಾರಣಾಸಿ: ವಾರಣಾಸಿಯ ಮಹಿಳಾ ಕುಶಲಕರ್ಮಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಗಾಲ್ವಾನ್ ಕಣಿವೆಯಲ್ಲಿರುವ ಸೈನಿಕರಿಗೆ ಮರದ ರಾಖಿಗಳನ್ನು ಕಳುಹಿಸಿ ಕೊಟ್ಟಿದ್ದಾರೆ.
ರಾಖಿಗಳನ್ನು ವಾರಣಾಸಿಯಲ್ಲಿರುವ ಪ್ರಧಾನ ಮಂತ್ರಿಗಳ ಸಂಸದೀಯ ಕಚೇರಿಗೆ ಹಸ್ತಾಂತರಿಸಲಾಗಿದೆ.
ಕುಶಲಕರ್ಮಿಗಳಾದ ಶಾಲಿನಿ, ವಂದನಾ, ರೀತಾ, ಪುಷ್ಪಾ ಮತ್ತು ಸೀತಮ್ ಅವರು ರಾಖಿಯೊಂದಿಗೆ ಮೋದಿಗೆ ಪತ್ರವೊಂದನ್ನು ಕಳುಹಿಸಿದ್ದು, ಅದರಲ್ಲಿ ರಾಖಿಗಳು ಗಾಲ್ವಾನ್ ಕಣಿವೆಯಲ್ಲಿನ ಸೈನಿಕರನ್ನು ತಲುಪುವಂತೆ ನೋಡಿಕೊಳ್ಳುವಂತೆ ಕೋರಿದ್ದಾರೆ.
ಇವರು ಕಳುಹಿಸಿಕೊಟ್ಟಿರುವ ಉಡುಗೊರೆ ಪ್ಯಾಕೆಟ್ಗಳು ಮರದ ಅಲಂಕಾರಿಕ ವಸ್ತುಗಳು ಮತ್ತು ಆಟಿಕೆಗಳನ್ನೂ ಕೂಡ ಒಳಗೊಂಡಿದೆ.
ಮರದ ರಾಖಿಗಳನ್ನು ತಯಾರಿಸಲು ಮಹಿಳೆಯರಿಗೆ ಸಹಾಯ ಮಾಡಿದ ಭೌಗೋಳಿಕ ಸೂಚಕ (ಜಿಐ) ತಜ್ಞ ರಜನಿಕಾಂತ್ ಅವರು, ಕುಶಲಕರ್ಮಿಗಳು ಒಂದು ವಾರದ ಹಿಂದೆಯೇ ಮರದ ರಾಖಿಗಳನ್ನು ತಯಾರಿಸಲು ಪ್ರಾರಂಭಿಸಿದರು ಎಂದು ಹೇಳಿದರು.
“ಇದು ನಮ್ಮ ಸುರಕ್ಷತೆ ಮತ್ತು ರಕ್ಷಣೆಗಾಗಿ ಹೋರಾಡುತ್ತಿರುವ ಪ್ರಧಾನಿ ಮತ್ತು ಸೈನಿಕರಿಗೆ ನಮ್ಮ ವಿನಮ್ರ ಗೌರವ ಮತ್ತು ಪ್ರೀತಿ” ಎಂದು ಶಾಲಿನಿ ಹೇಳಿದ್ದಾರೆ.
ಕೊರೋನಾವೈರಸ್ ಸಾಂಕ್ರಾಮಿಕದ ನಡುವೆ ಕೂಡ, ವಾರಣಾಸಿಯ ಮಹಿಳಾ ಕುಶಲಕರ್ಮಿಗಳು ಸುಮಾರು 50,000 ಜಿಐ-ಟ್ಯಾಗ್ ಹೊಂದಿದ ಮರದ ರಾಖಿಗಳನ್ನು ತಯಾರಿಸುವ ಉದ್ಯೋಗಾವಕಾಶವನ್ನು ಪಡೆದುಕೊಂಡಿದ್ದಾರೆ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.