ನವದೆಹಲಿ: ಪೋರ್ಟ್ ಲೂಯಿಸ್ನಲ್ಲಿ ಸ್ಥಾಪನೆ ಮಾಡಲಾದ ಮಾರಿಷನ್ನ ಹೊಸ ಸುಪ್ರೀಂಕೋರ್ಟ್ ಕಟ್ಟಡವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್ ಗುರುವಾರ ಜಂಟಿಯಾಗಿ ಉದ್ಘಾಟಿಸಿದರು. ಹೊಸ ಸುಪ್ರೀಂಕೋರ್ಟ್ ಕಟ್ಟಡವು ಮಾರಿಷಸ್ ರಾಜಧಾನಿಯ ಕೇಂದ್ರದಲ್ಲಿ ಒಂದು ಪ್ರಮುಖ ಹೆಗ್ಗುರುತಾಗಿದೆ, ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಭಾಗಿತ್ವವನ್ನು ಸಂಕೇತಿಸುತ್ತದೆ.
ಮಾರಿಷಸ್ ಸರ್ಕಾರವನ್ನು ಅಭಿನಂದಿಸಿದ ಪಿಎಂ ಮೋದಿ, “ಮೊದಲನೆಯದಾಗಿ, ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗದ ಪರಿಣಾಮಕಾರಿ ನಿರ್ವಹಣೆಗಾಗಿ ನಾನು ಸರ್ಕಾರ ಮತ್ತು ಮಾರಿಷಸ್ ಜನರನ್ನು ಅಭಿನಂದಿಸುತ್ತೇನೆ. ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಪೂರೈಕೆ ಮಾಡುವ ಮೂಲಕ ಮತ್ತು ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಭಾರತಕ್ಕೆ ಈ ಪ್ರಯತ್ನಗಳನ್ನು ಬೆಂಬಲಿಸಲು ಸಾಧ್ಯವಾಯಿತು ಎಂದು ನನಗೆ ಸಂತೋಷವಾಗಿದೆ” ಎಂದಿದ್ದಾರೆ.
ಹಿಂದೂ ಮಹಾಸಾಗರ ಪ್ರದೇಶದ ದೇಶಗಳ ಸಹಕಾರಕ್ಕಾಗಿನ ಭಾರತದ ಆಶಯದ ಭಾಗವಾಗಿ ಭಾರತೀಯ ಸಹಾಯದಿಂದ ಹೊಸ ಸುಪ್ರೀಂಕೋರ್ಟ್ ಕಟ್ಟಡದ ಕಾರ್ಯ ಪೂರ್ಣಗೊಂಡಿದೆ. ಉದ್ಘಾಟನೆಯ ಸಂದರ್ಭದಲ್ಲಿ ಮಾರಿಷಸ್ ನ್ಯಾಯಾಂಗದ ಹಿರಿಯ ಸದಸ್ಯರು ಮತ್ತು ಉಭಯ ದೇಶಗಳ ಗಣ್ಯರು ಉಪಸ್ಥಿತರಿದ್ದರು.
“ಪೋರ್ಟ್ ಲೂಯಿಸ್ನಲ್ಲಿನ ಹೊಸ ಸುಪ್ರೀಂಕೋರ್ಟ್ ಕಟ್ಟಡವು ನಮ್ಮ ಸಹಕಾರ ಮತ್ತು ನಮ್ಮ ಹಂಚಿಕೆಯ ಮೌಲ್ಯಗಳ ಸಂಕೇತವಾಗಿದೆ. ಭಾರತ ಮತ್ತು ಮಾರಿಷಸ್ ಎರಡೂ ತಮ್ಮ ಸ್ವತಂತ್ರ ನ್ಯಾಯಾಂಗಗಳ ವ್ಯವಸ್ಥೆಗಳನ್ನು ತಮ್ಮ ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ಥಂಭಗಳಾಗಿ ಗೌರವಿಸುತ್ತವೆ . ಈ ಆಕರ್ಷಕ ಹೊಸ ಕಟ್ಟಡವು ಅದರ ಆಧುನಿಕ ವಿನ್ಯಾಸ ಮತ್ತು ನಿರ್ಮಾಣದೊಂದಿಗೆ ಗೌರವದ ಸಂಕೇತವಾಗಿದೆ. ಮುಂಬರುವ ವರ್ಷಗಳಲ್ಲಿ ನಮ್ಮ ಸಹಭಾಗಿತ್ವವು ಇನ್ನೂ ಹೆಚ್ಚಿನದನ್ನು ಮಾಡಲು ಉದ್ದೇಶಿಸಿದೆ” ಎಂದು ಮೋದಿ ಹೇಳಿದ್ದಾರೆ
ಹೊಸ ಸುಪ್ರೀಂಕೋರ್ಟ್ ಕಟ್ಟಡ ಯೋಜನೆಯು ಭಾರತ ಸರ್ಕಾರವು 2016ರಲ್ಲಿ ಮಾರಿಷಸ್ಗೆ ವಿಸ್ತರಿಸಿದ 353 ಮಿಲಿಯನ್ ಡಾಲರ್ಗಳ ‘ವಿಶೇಷ ಆರ್ಥಿಕ ಪ್ಯಾಕೇಜ್ ಅಡಿಯಲ್ಲಿ ಜಾರಿಗೆ ತಂದ ಐದು ಯೋಜನೆಗಳಲ್ಲಿ ಒಂದಾಗಿದೆ.
Inaugurating the Supreme Court Building of Mauritius with PM @PKJugnauth. https://t.co/YhxXSsmoOg
— Narendra Modi (@narendramodi) July 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.