ನವದೆಹಲಿ: ಭಾರತದ ರಕ್ಷಣಾ ವ್ಯವಸ್ಥೆಯ ಗತಿಯನ್ನೇ ಬದಲಿಸಬಲ್ಲಂತಹ ಸಾಮರ್ಥ್ಯವನ್ನು ಹೊಂದಿರುವ ರಫೇಲ್ ಯುದ್ಧ ವಿಮಾನಗಳು ಹರಿಯಾಣದ ವಾಯು ನೆಲೆಗೆ ಬಂದು ಇಳಿದಿದೆ. ಭಾರತದ ವಾಯು ವಲಯವನ್ನು ಪ್ರವೇಶಿಸುತ್ತಿದ್ದಂತೆ 5 ರಫೇಲ್ ಯುದ್ಧ ವಿಮಾನಗಳಿಗೆ ಎರಡು SU30 MKI ವಿಮಾನಗಳು ಬೆಂಗಾವಲು ನೀಡಿದವು.
ಭಾರತೀಯ ರಕ್ಷಣಾ ಸಚಿವಾಲಯವು SU30 MKI ವಿಮಾನಗಳೊಂದಿಗೆ ರಫೇಲ್ ಬಾಣದ ರಚನೆಯ ಮೂಲಕ ಹಾರುತ್ತಿರುವ ವಿಡಿಯೋ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಹರಿಯಾಣದ ಅಂಬಾಲ ವಾಯು ನೆಲೆಗೆ ಪ್ರಸ್ತುತ ರಫೇಲ್ ಬಂದಿಳಿದಿದ್ದು, ಅಲ್ಲಿ ಅದು ಭಾರತೀಯ ವಾಯುಸೇನೆಯ ‘ಗೋಲ್ಡನ್ ಆ್ಯರೋಸ್’ ಎಂದೇ ಕರೆಯಲ್ಪಡುವ 17 ಸ್ಕ್ವಾಡ್ರನ್ನ ಭಾಗವಾಗಲಿದೆ.
ಪಶ್ಚಿಮ ಅರಬ್ಬಿ ಸಮುದ್ರದಲ್ಲಿ ಭಾರತೀಯ ವಾಯು ವಲಯವನ್ನು ಪ್ರವೇಶ ಮಾಡುತ್ತಿದ್ದಂತೆ ರಫೇಲ್ ಯುದ್ಧ ವಿಮಾನವು ಭಾರತೀಯ ನೌಕಾ ಹಡಗು ಐಎನ್ಎಸ್ ಕೊಲ್ಕತ್ತಾ ಜೊತೆ ಸಂಪರ್ಕ ಸಾಧಿಸಿತು.
ಗೋಲ್ಡನ್ ಆ್ಯರೋಸ್ ಸ್ಕ್ವಾಡ್ರನ್ನ ಗ್ರೂಪ್ ಕ್ಯಾಪ್ಟನ್ ಆಗಿರುವ ಹರ್ಕಿರತ್ ಸಿಂಗ್ ಅವರು ರಫೇಲ್ ತಂಡವನ್ನು ಮುನ್ನಡೆಸಿದರು.
ಮೊದಲ ಬ್ಯಾಚ್ನ 5 ವಿಮಾನಗಳು ಇಂದು ಭಾರತಕ್ಕೆ ಆಗಮಿಸಿವೆ.
The five Rafales escorted by 02 SU30 MKIs as they enter the Indian air space.@IAF_MCC pic.twitter.com/djpt16OqVd
— रक्षा मंत्री कार्यालय/ RMO India (@DefenceMinIndia) July 29, 2020
#HEAR: Indian #Rafale contingent establishes contact with Indian Navy warship INS Kolkata deployed in Western Arabian Sea. pic.twitter.com/NOnzKOo2fa
— ANI (@ANI) July 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.