ಬೆಂಗಳೂರು: ಭಾರತದ ಅತಿ ದೊಡ್ಡ ಇ-ಕಾಮರ್ಸ್ ಫ್ಲಿಪ್ಕಾರ್ಟ್ ಬೆಂಗಳೂರು ಸೇರಿದಂತೆ ಇನ್ನಿತರ ಪ್ರಮುಖ 6 ನಗರಗಳಲ್ಲಿ ಇಂದಿನಿಂದ ತೊಡಗಿದಂತೆ 90 ನಿಮಿಷದಲ್ಲಿ 2000ಗಳಷ್ಟು ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಫ್ಲಿಪ್ಕಾರ್ಟ್ ಕ್ವಿಕ್ ಅನ್ನು ಪರಿಚಯಿಸಿದ್ದು, ದಿನಸಿ, ಮಾಂಸ, ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಇನ್ನಿತರ ಸುಮಾರು 2000 ಗಳಷ್ಟು ವಸ್ತುಗಳನ್ನು ತುರ್ತಾಗಿ ಕೇವಲ 90 ನಿಮಿಷಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಗತವಾಗಿದೆ.
ಬೆಂಗಳೂರು ಸೇರಿದಂತೆ 6 ಹೈಪರ್ಲೋಕಲ್ ನಗರಗಳಲ್ಲಿ ಈ ಸೇವೆಯನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಅಥವಾ ಎರಡು ಗಂಟೆಗಳ ವಿತರಣಾ ಸ್ಲಾಟ್ ಅನ್ನು ಆಯ್ಕೆ ಮಾಡುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಸುರಕ್ಷಿತ ಮತ್ತು ವಿಶ್ವಾಸಾರ್ಹ ಅನುಭವಕ್ಕಾಗಿ ಜನರು ಫ್ಲಿಪ್ಕಾರ್ಟ್ ಅನ್ನು ಬಳಕೆ ಮಾಡುವಂತೆಯೂ ಸಂಸ್ಥೆ ತಿಳಿಸಿದೆ.
ಜೊತೆಗೆ ಪ್ರಸಕ್ತ ವರ್ಷದಲ್ಲಿ ಸಂಸ್ಥೆ ದೇಶದ ಎಲ್ಲಾ ನಗರಗಳಿಗೂ ತನ್ನ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದೂ ಸಂಸ್ಥೆ ಮಾಹಿತಿ ನೀಡಿದೆ. ಉನ್ನತ ಮಟ್ಟ, ಉತ್ಕೃಷ್ಟ ಗುಣಮಟ್ಟದ ವಸ್ತುಗಳನ್ನು ಜನರಿಗೆ ತಲುಪಿಸುವುದು, ಹೊಸ ಸ್ಥಳಗಳಲ್ಲಿಯೂ ಸೇವೆ ನೀಡುವುದು ಮತ್ತು ಶೀಘ್ರವಾಗಿ ಅಥವಾ ಕಡಿಮೆ ಸಮಯದಲ್ಲಿ ಗ್ರಾಹಕರನ್ನು ತಲುಪುವಲ್ಲಿಯೂ ಸಂಸ್ಥೆ ಪೂರಕ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಗ್ರಾಹಕರು ಎಲ್ಲಾ ದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೂ ಸಂಸ್ಥೆಯ ಸೇವೆಯನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದ್ದು, ಕನಿಷ್ಠ ವಿತರಣಾ ಶುಲ್ಕ 29 ರೂ. ಗಳಿಂದ ತೊಡಗಿದಂತೆ ವಿತರಣಾ ಶುಲ್ಕ ಆರಂಭವಾಗುವುದಾಗಿಯೂ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಜೊತೆಗೆ ಸ್ಥಳೀಯ ಉದ್ಯಮ ಶೀಲತೆಗೆ ಪ್ರೋತ್ಸಾಹ, ಸಣ್ಣ ಪ್ರಮಾಣದ ಉದ್ಯಮಗಳನ್ನು ಇ- ಕಾಮರ್ಸ್ ನೊಳಕ್ಕೆ ತರುವ ಪ್ರಯತ್ನವನ್ನೂ ಸಂಸ್ಥೆ ಮಾಡುತ್ತಿದೆ ಎಂದೂ ಸಂಸ್ಥೆಯ ಅಧಿಕೃತ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.