ನವದೆಹಲಿ: ಕೊವಿಡ್-19 ರೋಗಿಗಳ ಸಂಖ್ಯೆಯ ನಿರಂತರ ಹೆಚ್ಚಳದಿಂದಾಗಿ, ಹಾಸಿಗೆಗಳ ಸಂಖ್ಯೆಯ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ (DIAT) , ವೈರಸ್ ಹರಡುವಿಕೆಯನ್ನು ನಿಲ್ಲಿಸುವ / ಕಡಿಮೆ ಮಾಡುವ ಮೂಲಕ ಕೋವಿಡ್-19 ಅನ್ನು ಎದುರಿಸಲು ಪುಣೆಯಲ್ಲಿ ʼಆಶ್ರಯʼ ಎಂಬ ಮೆಡಿಕಲ್ ಬೆಡ್ ಐಸೊಲೇಷನ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದೆ. ಕೋವಿಡ್-19 ರೋಗಿಗಳ ಸರಿಯಾದ ಐಸೋಲೇಷನ್ ಅನ್ನು ಕಾಪಾಡಿಕೊಳ್ಳಲು ಇದು ಕಡಿಮೆ ವೆಚ್ಚದ, ಮರುಬಳಕೆ ಮಾಡಬಹುದಾದ ಪರಿಹಾರವಾಗಿದೆ. ಇದು ರೋಗಿಯ ಉಸಿರಾಡುವಿಕೆಯನ್ನು ಹೀರಿಕೊಳ್ಳುವ ವ್ಯವಸ್ಥೆಯನ್ನು ಹೊಂದಿದೆ. ಇದರಿಂದ ಬೇರೆಯವರಿಗೆ ಸೋಂಕು ಹರಡುವುದಿಲ್ಲ. ರೋಗಿಯ ಉಸಿರಾಟವನ್ನು ಫಿಲ್ಟರ್ ಮಾಡುತ್ತದೆ ಮತ್ತು ಸೋಂಕುರಹಿತಗೊಳಿಸುತ್ತದೆ.
ಬೆಡ್ ಐಸೊಲೇಷನ್ ಸಿಸ್ಟಮ್ ಹೊದಿಕೆಯು ವಿಶೇಷ ವಸ್ತು ಮತ್ತು ಉತ್ಪಾದನಾ ಪ್ರಕ್ರಿಯೆಯಿಂದ ಪಾರದರ್ಶಕ ಮತ್ತು ಅರೆಪಾರದರ್ಶಕವಾಗಿದೆ. ವೈದ್ಯಕೀಯ ದರ್ಜೆಯ ವಸ್ತುಗಳ ರಚನೆಯಿಂದ ಬೆಂಬಲಿಸಲ್ಪಟ್ಟಿದೆ. ಉತ್ಪನ್ನವು ಮಾಡ್ಯುಲರ್ ಮತ್ತು ವಿನ್ಯಾಸದಲ್ಲಿ ಪೋರ್ಟಬಲ್ ಆಗಿದೆ ಮತ್ತು ಸಾಂಸ್ಥಿಕವಾಗಿ, ಆಸ್ಪತ್ರೆಗಳು ಮತ್ತು ಮನೆ / ವೈಯಕ್ತಿಕ ಸಂಪರ್ಕತಡೆಯಂತಹ ವಿಭಿನ್ನ ಅವಶ್ಯಕತೆಗಳಿಗೆ ಸೂಕ್ತವಾಗಿರುತ್ತದೆ. ಹೊದಿಕೆ ಆಂಟಿಬ್ಯಾಕ್ಟೀರಿಯಲ್-ಆಂಟಿಫಂಗಲ್ ಆಗಿರುವುದರಿಂದ ಅದನ್ನು ಮರುಬಳಕೆ ಮಾಡಬಹುದು ಮತ್ತು ಅದನ್ನು ಸ್ವಚ್ಛಗೊಳಿಸಬಹುದು.
ಪ್ರತಿಯೊಂದು ಹೊದಿಕೆಯು ಒಂದು ಸೆಟ್ ಹಾಸಿಗೆ, ಟೇಬಲ್ ಮತ್ತು ಕುರ್ಚಿಯ ಜೊತೆಗೆ ಕೆಲವು ವಾಕಿಂಗ್ ಸ್ಥಳಾವಕಾಶವನ್ನು ಹೊಂದಿದೆ. ಹೊದಿಕೆಯ ಅಗಲವನ್ನು ಸ್ಥಳದ ಲಭ್ಯತೆಗೆ ಅನುಗುಣವಾಗಿ ಸರಿಹೊಂದಿಸಬಹುದು. ರೋಗಿಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಹೊದಿಕೆ ಕೆಳಗಿನಿಂದ 3 ಅಡಿಗಳಷ್ಟು ಅಪಾರದರ್ಶಕವಾಗಿರುತ್ತದೆ.
ಮೂಲಮಾದರಿಯ ತಯಾರಕರಾದ ಕ್ಲೀನ್ಕೋರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಪ್ರಕಾರ, 10 ಹಾಸಿಗೆಗಳ ಒಂದು ಘಟಕದ ಸೆಟಪ್ ವೆಚ್ಚ ಅಂದಾಜು 1.0 ಲಕ್ಷಗಳು ಮತ್ತು ಮನೆಯ ಸಂಪರ್ಕತಡೆಗೆ ಒಂದೇ ಹಾಸಿಗೆ 15,000 ಅಂದಾಜು ಇರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.