ನವದೆಹಲಿ: ಜಾಗತಿಕವಾಗಿ ಕೊರೋನಾವೈರಸ್ ಸಂಖ್ಯೆಯು 16,642,264 ಕ್ಕೆ ತಲುಪಿದ್ದು, ಈ ಹಿನ್ನೆಲೆಯಲ್ಲಿ ಗೂಗಲ್ ತನ್ನ 200,000 ಉದ್ಯೋಗಿಗಳು ಮತ್ತು ಗುತ್ತಿಗೆದಾರರಿಗೆ ಕನಿಷ್ಠ 2021 ಜೂನ್ವರೆಗೆ ಮನೆಯಿಂದಲೇ ಕೆಲಸ ಮಾಡಿಸುವ ನಿರ್ಧಾರ ತಗೆದುಕೊಂಡಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಸೋಮವಾರ ಹೊರಡಿಸಿದ ರಿಮೋಟ್ ವರ್ಕ್ ಆರ್ಡರ್, ಗೂಗಲ್ನ ಕಾರ್ಪೊರೇಟ್ ಪೋಷಕ ಆಲ್ಫಾಬೆಟ್ ಇಂಕ್ ಒಡೆತನದ ಇತರ ಕಂಪನಿಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.
ಈ ವರ್ಷದ ಉಳಿದ ದಿನಗಳಲ್ಲಿ ತನ್ನ ಹೆಚ್ಚಿನ ಕಚೇರಿಗಳನ್ನು ಮುಚ್ಚುವ ಗೂಗಲ್ನ ಹಿಂದಿನ ಯೋಜನೆಯ ಆರು ತಿಂಗಳ ವಿಸ್ತರಣೆ ಇದಾಗಿದೆ.
ಉದ್ಯೋಗಿಗಳಿಗೆ ಇಮೇಲ್ ಮಾಡಿರುವ ಗೂಗಲ್, “ಈ ವಿಸ್ತೃತ ಟೈಮ್ಲೈನ್ ಮಿಶ್ರ ಭಾವನೆಗಳೊಂದಿಗೆ ಬರಬಹುದೆಂದು ನನಗೆ ತಿಳಿದಿದೆ ಮತ್ತು ನೀವು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ” ಎಂದು ಆಲ್ಫಾಬೆಟ್ನ ಸಿಇಒ ಆಗಿರುವ ಪಿಚೈ ಬರೆದಿದ್ದಾರೆ. ಈ ನಿರ್ಧಾರ ವೈರಸ್ನಿಂದ ಜನರನ್ನು ರಕ್ಷಿಸಲು ಸಹಾಯ ಮಾಡುವುದರ ಜೊತೆಗೆ, ಮಕ್ಕಳು ಇರುವ ಪೋಷಕರಿಗೆ ಮತ್ತು ಒಂದು ವರ್ಷ ಲೀಸ್ ಮೂಲಕ ವಾಸವಿರುವರಿಗೆ ಸಹಕಾರಿಯಾಗುತ್ತದೆ ಎಂದಿದ್ದಾರೆ.
ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ರೋಗವನ್ನು ಘೋಷಿಸುವ ಮೊದಲೇ ಗೂಗಲ್ ಮತ್ತು ಇತರ ಹಲವು ಪ್ರಮುಖ ತಾಂತ್ರಿಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಹೇಳಿದ್ದವು. ಗೂಗಲ್ ಮೂಲತಃ ಗಮನಾರ್ಹ ಸಂಖ್ಯೆಯ ಉದ್ಯೋಗಿಗಳಿಗೆ ಈ ಬೇಸಿಗೆಯಲ್ಲಿ ತನ್ನ ಮೌಂಟೇನ್ ವ್ಯೂ, ಕ್ಯಾಲಿಫೋರ್ನಿಯಾ ಪ್ರಧಾನ ಕಚೇರಿ ಮತ್ತು ಇತರ ಕಚೇರಿಗಳಿಗೆ ಮರಳುವಂತೆ ತಿಳಿಸಲು ಯೋಜಿಸಿತ್ತು. ಆದರೆ ಸಾಂಕ್ರಾಮಿಕ ರೋಗ ಹರಡುವಿಕೆಯು ನಿಲ್ಲದ ಕಾರಣ ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ಗೂಗಲ್ ಇನ್ನೂ ಒಂದು ವರ್ಷದವರೆಗೆ ವಿಸ್ತರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.