ನವದೆಹಲಿ: ಭಾರತ ಸರ್ಕಾರ 10 ಡೀಸೆಲ್ ಲೊಕೊಮೋಟಿವ್ಗಳನ್ನು ಬಾಂಗ್ಲಾದೇಶ ರೈಲ್ವೆಗೆ ಹಸ್ತಾಂತರಿಸಿದೆ. ಉಭಯ ದೇಶಗಳ ನಡುವೆ ಆರ್ಥಿಕ ಸಂಬಂಧಗಳು ಮತ್ತು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಾಂಗ್ಲಾಗೆ ಇದನ್ನು ಭಾರತ ನೀಡಿದೆ. ಸೋಮವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಲೊಕೊಮೋಟಿವ್ ಹಸ್ತಾಂತರವನ್ನು ನಡೆಸಲಾಯಿತು.
ಹಸ್ತಾಂತರ ಸಮಾರಂಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ರೈಲ್ವೆ ಸಚಿವ ಸುರೇಶ್ ಅಂಗಡಿ ಅವರು ಇದ್ದರು.
ಹಸ್ತಾಂತರದ ಭೌತಿಕ ಸ್ಥಳವೆಂದರೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪೂರ್ವ ರೈಲ್ವೆಯ ಗೆಡೆ ನಿಲ್ದಾಣ ಮತ್ತು ಸ್ವೀಕರಿಸುವ ಕೇಂದ್ರ ಬಾಂಗ್ಲಾದೇಶದ ದರ್ಶನ. ದೆಹಲಿಯಿಂದ ಲೊಕೊಮೋಟಿವ್ಗಳನ್ನು ಚಾಲನೆ ಮಾಡಿದ ನಂತರ ಮಾತನಾಡಿದ ಪಿಯೂಷ್ ಗೋಯಲ್, “ಈ ಲೊಕೊಮೋಟಿವ್ಗಳು ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆಯುತ್ತಿರುವ ಸರಕು ರೈಲು ಕಾರ್ಯಾಚರಣೆಯನ್ನು ನಿರ್ವಹಿಸಲು ಉಪಯುಕ್ತವಾಗುತ್ತವೆ” ಎಂದು ಹೇಳಿದರು.
10 ಲೊಕೊಮೋಟಿವ್ಗಳನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಲಾಗುತ್ತಿದ್ದು, ಕನಿಷ್ಠ 28 ವರ್ಷಗಳ ಬಾಳಿಕೆಯನ್ನು ಇವು ಹೊಂದಿವೆ ಮತ್ತು 120 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಲೊಕೊಮೊಟಿವ್ಗಳು ಸರಕು ಸಾಗಣೆ ಮತ್ತು ಪ್ರಯಾಣಿಕರ ರೈಲುಗಳನ್ನು ಸಾಗಿಸಲು ಸೂಕ್ತವಾಗಿವೆ ಮತ್ತು ಒತ್ತಡ ರಹಿತ ಚಾಲನೆ ಮತ್ತು ಸುರಕ್ಷಿತ ಓಟಕ್ಕೆ ಸುಧಾರಿತ ಗೋಚರತೆಯನ್ನು ಒದಗಿಸುತ್ತದೆ. ಬಾಂಗ್ಲಾದೇಶಕ್ಕೆ ನೀಡಲಾಗುತ್ತಿರುವ 3300 ಎಚ್ಪಿ ಡಬ್ಲ್ಯುಡಿಎಂ 3 ಡಿ ಲೊಕೊಗಳು 28 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೀವನವನ್ನು ಹೊಂದಿವೆ ಮತ್ತು 120 ಕಿ.ಮೀ ವೇಗದಲ್ಲಿ ಓಡಲು ವಿನ್ಯಾಸಗೊಳಿಸಲಾಗಿದೆ. ಮೈಕ್ರೊಪ್ರೊಸೆಸರ್ ಆಧಾರಿತ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ.
ಸಮಾರಂಭದಲ್ಲಿ ಜೈಶಂಕರ್ ಅವರು, ಕೋವಿಡ್ -19 ಸಾಂಕ್ರಾಮಿಕ ರೋಗದಲ್ಲೂ ಒಟ್ಟಾರೆ ಸಹಕಾರದ ವೇಗ ಕಡಿಮೆಯಾಗಿಲ್ಲ ಮತ್ತು ಭಾರತವು ಹೆಚ್ಚಿನ ಮೈಲಿಗಲ್ಲುಗಳನ್ನು ದಾಟಲು ಎದುರು ನೋಡುತ್ತಿದೆ ಎಂದಿದ್ದಾರೆ.
Handing over 10 diesel locomotives from Indian Railways to Bangladesh Railways through Video Conference https://t.co/VuDGKChC8a
— Piyush Goyal (@PiyushGoyal) July 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.