ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯುತ್ ಮೂಲಸೌಕರ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಡೆಸುತ್ತಿದೆ. ಸೋಮವಾರ ಕಣಿವೆ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ಜಿಸಿ ಮುರ್ಮು ಅವರು ಜಮ್ಮು ವಿಭಾಗದಲ್ಲಿ 49 ವರ್ಧಿತ ವಿದ್ಯುತ್ ಯೋಜನೆಗಳನ್ನು ಜನರಿಗೆ ಸಮರ್ಪಿಸಿದರು.
ವರದಿಗಳ ಪ್ರಕಾರ ಜಮ್ಮು ವಿಭಾಗದ 8 ಜಿಲ್ಲೆಗಳಿಗಾಗಿ ಈ ವಿದ್ಯುತ್ ಯೋಜನೆಯನ್ನು ಸಮರ್ಪಿಸಲಾಗಿದೆ. 81 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
ಎಲ್ಡಿಯು ಮುರ್ಮು ಅವರು ಯೋಜನೆಯನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಡಿಡಿಯುಜಿಜೆವೈ, ಐಪಿಡಿಎಸ್, ಪಿಎಂಡಿಪಿ ನಗರ ಮತ್ತು ಪಿಎಂಡಿಪಿ ಗ್ರಾಮೀಣ ಮುಂತಾದ ಹಲವಾರು ಕೇಂದ್ರ ಯೋಜನೆಗಳ ಅಡಿಯಲ್ಲಿ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ.
ಈ ಯೋಜನೆಗಳಿಂದಾಗಿ 30,000 ಕ್ಕೂ ಹೆಚ್ಚು ಗ್ರಾಹಕರು, 300 ಕೈಗಾರಿಕೆಗಳು ಮತ್ತು 200 ಹೋಟೆಲ್ಗಳಿಗೆ ಸಾಮರ್ಥ್ಯ ವೃದ್ಧಿಯ ಪ್ರಯೋಜನ ಸಿಗಲಿದೆ.
ಎಲ್ಲಾ ಯೋಜನೆಗಳ ಪೈಕಿ ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನಕಾರಿ ಎಂದರೆ, ಪ್ಯಾಟ್ನಿಟಾಪ್ ಪ್ರವಾಸಿ ತಾಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಮೊಟ್ಟಮೊದಲ ಅಂಡರ್ ಗ್ರೌಂಡ್ ಕೇಬಲಿಂಗ್ ಕಾರ್ಯ. ಇದನ್ನು ಪಿಎಂಡಿಪಿ ಗ್ರಾಮೀಣ ಯೋಜನೆಯಡಿ 12.58 ಕೋಟಿ ರೂ. ವೆಚ್ಚದಲ್ಲಿ ಕಾರ್ಯಗತಗೊಳಿಸಲಾಗಿದೆ.
ಇದಲ್ಲದೆ, ಯೋಜನೆಗಳು ಪ್ರಾಥಮಿಕವಾಗಿ ಹೊಸ 33/11 ಕೆವಿ ವಿದ್ಯುತ್ ಉಪಕೇಂದ್ರಗಳ ನಿರ್ಮಾಣವನ್ನು ಒಳಗೊಂಡಿವೆ, ಮತ್ತು ಹೆಚ್ಚುವರಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸುವ ಮೂಲಕ ಅಥವಾ ಅಸ್ತಿತ್ವದಲ್ಲಿರುವ ಟ್ರಾನ್ಸ್ಫಾರ್ಮರ್ಗಳ ವರ್ಧನೆಯಿಂದ ಅಸ್ತಿತ್ವದಲ್ಲಿರುವ 33/11 ಕೆವಿ ಉಪಕೇಂದ್ರಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ಜಮ್ಮು ಮತ್ತು ಕಾಶ್ಮೀರದ ವಿದ್ಯುತ್ ಅಭಿವೃದ್ಧಿ ವಿಭಾಗದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಅವರ ಪ್ರಕಾರ, ಈ ಯೋಜನೆಗಳು ಎಲ್ಲಾ ಋತುಗಳಲ್ಲಿ ಗ್ರಾಹಕರಿಗೆ ವಿಶ್ವಾಸಾರ್ಹ ಶಕ್ತಿಯನ್ನು ಒದಗಿಸುತ್ತದೆ, ವಿಶೇಷವಾಗಿ ಚಳಿಗಾಲದಲ್ಲಿ ಈ ಪ್ರದೇಶವು ಹಿಮದಿಂದ ಕೂಡಿರುವುದರಿಂದ ಈ ಯೋಜನೆ ಹೆಚ್ಚು ಮಹತ್ವಪೂರ್ಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.