ನವದೆಹಲಿ: ಕ್ರೀಡೆಗೆ ಸಂಬಂಧಿಸಿದಂತೆ ಭಾರತಕ್ಕೆ ಮಹತ್ವದ ಸುದ್ದಿಯೊಂದು ದೊರೆತಿದೆ. 2018ರ ಏಷ್ಯನ್ ಕ್ರೀಡಾಕೂಟದಲ್ಲಿ 4×400 ಮಿಶ್ರ ರಿಲೇ ಕ್ವಾರ್ಟೆಟ್ನಲ್ಲಿ ಭಾರತೀಯ ಕ್ರೀಡಾಳುಗಳು ಪಡೆದುಕೊಂಡಿದ್ದ ಬೆಳ್ಳಿಯ ಪದಕ ಈಗ ಬಂಗಾರವಾಗಿ ಭರ್ತಿ ಪಡೆದುಕೊಂಡಿದೆ.
ಈ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೊಹಮ್ಮದ್ ಅನಸ್, ಎಂ.ಆರ್.ಪೂವಮ್ಮ, ಹಿಮಾ ದಾಸ್ ಮತ್ತು ಅರೋಕಿಯಾ ರಾಜೀವ್ ಬೆಳ್ಳಿ ಪದಕವನ್ನು ಜಯಿಸಿದ್ದರು. ಅದರೀಗ ಬಂಗಾರದ ಪದಕ ಜಯಿಸಿದ್ದ ತಂಡ ಡೋಪಿಂಗ್ ಟೆಸ್ಟ್ನಲ್ಲಿ ವೈಫಲ್ಯವನ್ನು ಕಂಡಿದೆ. ಹೀಗಾಗಿ ಅವರನ್ನು ಅನರ್ಹಗೊಳಿಸಲಾಗಿದೆ. ಇದರಿಂದ ಭಾರತದ ಪದಕ ಮೇಲ್ದರ್ಜೆಗೆ ಏರಿದೆ.
ಬಹ್ರೇನ್ ವಿಜೇತ ತಂಡವಾಗಿದ್ದು, ಡೋಪ್ನಲ್ಲಿ ವಿಫಲವಾದ ಹಿನ್ನಲೆಯಲ್ಲಿ ಅವರ ಪದಕವನ್ನು ಅನರ್ಹಗೊಳಿಸಲಾಗಿದೆ ಮತ್ತು ಆ ತಂಡ 4 ವರ್ಷಗಳ ನಿಷೇಧಕ್ಕೆ ಒಳಗಾಗಿದೆ.
ಮತ್ತೊಂದೆಡೆ, ಜಕಾರ್ತದಲ್ಲಿ ನಡೆದ ಮಹಿಳೆಯರ 400 ಮೀ ಹರ್ಡಲ್ಸ್ ಸ್ಪರ್ಧೆಯ ಅಂತಿಮ ಓಟದಲ್ಲಿ ಅನು ರಾಘವನ್ 4ನೇ ಸ್ಥಾನವನ್ನು ಪಡೆದುಕೊಂಡಿದ್ದರು. ಆದರೆ ಮೂಲತಃ ಓಟವನ್ನು ಗೆದ್ದುಕೊಂಡ ಅಡೆಕೋಯಾ ಅವರ ಡೋಪ್ ಫಲಿತಾಂಶ ವಿಫಲಗೊಂಡ ಹಿನ್ನೆಲೆಯಲ್ಲಿ ಅನು ಅವರಿಗೆ ಕಂಚಿನ ಪದಕವನ್ನು ಪ್ರದಾನಿಸಲಾಗಿದೆ.
Official confirmation: India’s 4×400 mixed relay team of Mohammed Anas, Poovamma, Hima Das, and Arokia Rajiv at the 2018 Asian Games will have their silver medals upgraded to gold . Winners Bahrain have been disqualified as Kemi Adekoya received a 4-year doping ban recently. pic.twitter.com/BVWLfzQs63
— Andrew Amsan (@AndrewAmsan) July 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.