ನವದೆಹಲಿ: ಭಾರತದ ಸೈಬರ್ ಸೆಕ್ಯುರಿಟಿ ನೋಡಲ್ ಏಜೆನ್ಸಿ ಸಿಇಆರ್ಟಿ-ಇನ್ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ಗೆ ನೋಟಿಸ್ ಜಾರಿಗೊಳಿಸಿದ್ದು, ಇತ್ತೀಚಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಗಣ್ಯರ ಟ್ವಿಟ್ ಖಾತೆ ಹ್ಯಾಕ್ನ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡುವಂತೆ ತಿಳಿಸಿದೆ. ಅಲ್ಲದೇ, ಇದರಿಂದ ಪೀಡಿತರಾದ ಭಾರತೀಯ ಬಳಕೆದಾರರ ಸಂಖ್ಯೆ ಮತ್ತು ಅವರ ಡೇಟಾದ ಮೇಲೆ ಬೀರಿದ ಪರಿಣಾಮಗಳ ಬಗ್ಗೆಯೂ ವಿವರವನ್ನು ಕೇಳಿದೆ ಎಂದು ಮೂಲವೊಂದು ತಿಳಿಸಿದೆ.
ದುರುದ್ದೇಶಪೂರಿತ ಟ್ವೀಟ್ಗಳು ಮತ್ತು ಲಿಂಕ್ಗಳಿಗೆ ಭೇಟಿ ಪಡೆದ ಭಾರತದ ಬಳಕೆದಾರರ ಸಂಖ್ಯೆಯನ್ನು ಮತ್ತು ಪೀಡಿತರಾದ ಬಳಕೆದಾರರಿಗೆ ಅವರ ಟ್ವಿಟರ್ ಖಾತೆಗೆ ಅನಧಿಕೃತ ಪ್ರವೇಶ ನಡೆದಿದೆ ಎಂಬ ಮಾಹಿತಿಯನ್ನು ಟ್ವಿಟರ್ ಸಂಸ್ಥೆಯು ನೀಡಿದೆಯೇ ಎಂಬ ಬಗ್ಗೆ ಸಿಇಆರ್ಟಿ-ಇನ್ ಟ್ವಿಟರ್ಗೆ ಮಾಹಿತಿ ಕೇಳಿದೆ ಎಂದು ವರದಿಗಳು ತಿಳಿಸಿವೆ.
ಹ್ಯಾಕ್ ಮಾಡಿದ ದಾಳಿಕೋರರು ಬಳಸಿಕೊಂಡಿರುವ ದುರ್ಬಲ ಮಾರ್ಗ ಮತ್ತು ದಾಳಿಯ ಮೋಡಸ್ ಒಪೆರಾಂಡಿ ಬಗ್ಗೆಯೂ ಸರ್ಕಾರ ಮಾಹಿತಿ ಕೇಳಿದೆ ಮತ್ತು ಹ್ಯಾಕಿಂಗ್ ಘಟನೆಯ ಪರಿಣಾಮವನ್ನು ತಗ್ಗಿಸಲು ಟ್ವಿಟರ್ ಕೈಗೊಂಡ ಪರಿಹಾರ ಕ್ರಮಗಳ ವಿವರಗಳನ್ನು ನೀಡುವಂತೆ ಕೋರಿದೆ.
ಅನೇಕ ಜಾಗತಿಕ ಕಾರ್ಪೊರೇಟ್ ನಾಯಕರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ವ್ಯವಹಾರಗಳ ಖಾತೆಗಳನ್ನು ಹ್ಯಾಕರ್ಗಳು ಹ್ಯಾಕ್ ಮಾಡಿದ್ದಾರೆ. ಟ್ವಿಟರ್ನ ವ್ಯವಸ್ಥೆಗಳಿಗೆ ಪ್ರವೇಶವನ್ನು ಪಡೆದುಕೊಂಡಿದ್ದಾರೆ ಎಂಬ ವರದಿಗಳ ನಂತರ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್ಟಿ-ಇನ್) ಕಾರ್ಯಪ್ರವೃತ್ತಗೊಂಡಿತು.
ಸೈಬರ್ ದಾಳಿಕೋರರು ಜಾಗತಿಕ ಉನ್ನತ ನಾಯಕರ ಟ್ವಿಟ್ಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಮತ್ತು ಅಮೆಜಾನ್ ಸಿಇಒ ಜೆಫ್ ಬೆಜೋಸ್, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಟೆಸ್ಲಾ ಸಿಇಒ ಎಲೋನ್ ಸೇರಿದಂತೆ ಅನೇಕ ಕಾರ್ಪೊರೇಟ್ ನಾಯಕರು ಹ್ಯಾಕ್ಗೆ ಒಳಗಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.