ನವದೆಹಲಿ: ಕೇಂದ್ರ ಸರ್ಕಾರವು “ಆತ್ಮನಿರ್ಭರ ಆ್ಯಪ್ ಇನ್ನೋವೇಶನ್ ಚಾಲೆಂಜ್” ಗೆ ಪ್ರವೇಶಾತಿ ನಮೂದುಗಳನ್ನು ಸಲ್ಲಿಸಲು ನೀಡಿದ್ದ ಗಡುವನ್ನು ಜುಲೈ 26ರವರೆಗೆ ವಿಸ್ತರಣೆ ಮಾಡಿದೆ. ಈ ಚಾಲೆಂಜ್ ಅಡಿಯಲ್ಲಿ, ಎಲ್ಲಾ ಸ್ಥಳೀಯ ಸ್ಟಾರ್ಟ್ ಅಪ್ಗಳು ಮತ್ತು ಉದ್ಯಮಿಗಳು ಭಾಗವಹಿಸಬಹುದು. ಆತ್ಮನಿರ್ಭರ್ ಭಾರತ್ ಆ್ಯಪ್ ಇನ್ನೋವೇಶನ್ ಚಾಲೆಂಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಿದ್ದರು.
“ಆತ್ಮನಿರ್ಭರ್ ಆ್ಯಪ್ ಇನ್ನೋವೇಶನ್ ಚಾಲೆಂಜ್” ನಲ್ಲಿ ನಮೂದುಗಳನ್ನು ಸಲ್ಲಿಸುವ ಗಡುವನ್ನು ಕೇಂದ್ರ ಸರ್ಕಾರ ಶುಕ್ರವಾರ ಜುಲೈ 18 ರಿಂದ ಜುಲೈ 26 ರವರೆಗೆ ವಿಸ್ತರಿಸಿದೆ. ಈ ಸವಾಲಿನಡಿಯಲ್ಲಿ, ಎಲ್ಲಾ ಸ್ಥಳೀಯ ಸ್ಟಾರ್ಟ್ ಅಪ್ ಗಳು ಮತ್ತು ಉದ್ಯಮಿಗಳು ಭಾಗವಹಿಸಬಹುದು ಮತ್ತು novate.mygov.in.ನಲ್ಲಿ ಸರ್ಕಾರದ ಅಪ್ಲಿಕೇಶನ್ ಚಾಲೆಂಜ್ ವಿವರಗಳನ್ನು ಪಡೆಯಬಹುದಾಗಿದೆ.
ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಆತ್ಮನಿರ್ಭರ ಭಾರತ್ ಆ್ಯಪ್ ಇನ್ನೋವೇಶನ್ ಚಾಲೆಂಜ್ಗೆ, ದೇಶಾದ್ಯಂತದ ಟೆಕ್ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್ ಗಳಿಂದ ಉತ್ತಮ ಪ್ರತಿಕ್ರಿಯೆ ಕಂಡಿದೆ. ಗುರುತಿಸಲಾದ 8 ವಿಭಾಗಗಳಲ್ಲಿ ಈವರೆಗೆ 2,353 ನಮೂದುಗಳನ್ನು ಸ್ವೀಕರಿಸಲಾಗಿದೆ. ಇತ್ತೀಚೆಗೆ ಘೋಷಿಸಲಾದ ಈ ಆ್ಯಪ್ ಇನ್ನೋವೇಶನ್ ಚಾಲೆಂಜ್, ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ್’ ಉಪಕ್ರಮಗಳಿಗೆ ಉತ್ತೇಜನ ನೀಡುವ ವಿಶ್ವಮಟ್ಟದ ಅಪ್ಲಿಕೇಶನ್ಗಳನ್ನು ರಚಿಸಲು ಸ್ಟಾರ್ಟ್ ಅಪ್ಗಳನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ಆರೋಗ್ಯ ಮತ್ತು ಸ್ವಾಸ್ಥ್ಯ, ಅಗ್ರಿಟೆಕ್ ಮತ್ತು ಫಿನ್ಟೆಕ್ ಸೇರಿದಂತೆ ವ್ಯವಹಾರ, ಸುದ್ದಿ, ಆಟಗಳು, ಕಚೇರಿ ಉತ್ಪಾದಕತೆ ಮತ್ತು ವರ್ಕ್ ಫ್ರಂ ಹೋಂ, ಸೋಶಲ್ ನೆಟ್ವರ್ಕಿಂಗ್, ಇ-ಲರ್ನಿಂಗ್ ಮತ್ತು ಮನರಂಜನೆ ಸೇರಿದಂತೆ ಎಂಟು ವಿಭಾಗಗಳಲ್ಲಿ ಅಪ್ಲಿಕೇಶನ್ ಇನ್ನೋವೇಶನ್ ಚಾಲೆಂಜ್ ಅನ್ನು ಘೋಷಿಸಲಾಗಿದೆ.
Government extends the last date for submission of entries in AatmaNirbhar App Innovation Challenge to 26th July 2020
To participate, one can log in to https://t.co/41YXVUmI8G
Read: https://t.co/HEJUnwY9jL
— PIB India (@PIB_India) July 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.