ಕೋಟ : ಬ್ರಿಟಿಷರಿಂದ ನಿರ್ಮಿಸಲಾದ ಅತ್ಯಂತ ಹಳೆಯ ನೌಕೆ, ಭಾರತೀಯ ನೌಕಾ ಕಾರ್ಯಚರಣೆಯಲ್ಲಿ ಉಪಯೋಗಿಸುವ ಐಎನ್ಎಸ್ ವಿರಾಟ್ ವಿಮಾನ ವಾಹಕ ಹಡಗನ್ನು ಮುಂದಿನ ವರ್ಷದಿಂದ ಕಾರ್ಯಾಚರಣೆಯಿಂದ ವಿಮುಕ್ತಗೊಳಿಸಲಿದ್ದು, ವಿಮಾನ ವಾಹಕ ನೌಕೆಯ ವಸ್ತು ಸಂಗ್ರಹಾಲಯ ಸ್ಥಾಪಿಸುವ ಪ್ರಸ್ತಾವನೆ ಸರಕಾರದ ಮುಂದಿದೆ
ಈ ಕ್ರಾಪ್ಟ್ನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧೀನಕ್ಕೆ ನೀಡುವಂತೆ, ಕರಾವಳಿಯಲ್ಲಿ ವಿರಾಟ್ ಏರ್ಕ್ರಾಪ್ಟ್ ಕ್ಯಾರಿಯರ್ ವಸ್ತು ಸಂಗ್ರಹಾಲಯ ಸ್ಥಾಪಿಸಲು ಅವಕಾಶ ನೀಡುಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ತಿಳಿಸಿದರು.
ಈ ಹಡಗು 1959ರಲ್ಲಿ ಸೇವೆ ಆರಂಭಿಸಿದ್ದು, ಈ ತನಕ 56 ವರ್ಷಗಳ ಸೇವೆ ಸಲ್ಲಿಸಿದೆ. ಇಂತಹ ಏರ್ಕ್ರಾಪ್ಟ್ ಕ್ಯಾರಿಯರ್ ವಸ್ತು ಸಂಗ್ರಹಾಲಯವನ್ನು ಕರ್ನಾಟಕದಲ್ಲಿ ಸ್ಥಾಪಿಸುವುದು ಒಂದು ಪ್ರತಿಷ್ಠೆಯ ವಿಷಯ. ನಮ್ಮ ಕರಾವಳಿಯ ಮಂಗಳೂರು ಅಥವಾ ಉತ್ತರಕನ್ನಡ ಜಿಲ್ಲೆಯ ಕಾರವಾರವನ್ನು ಕೇಂದ್ರವನ್ನಾಗಿಸಿ ಇದನ್ನು ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಮೂಲಕ ಮನವಿ ಮಾಡಲಾಗಿದೆ. ಯೋಜನೆ ಕಾರ್ಯಗತಗೊಳಿಸುವುದಾದರೆ ಮೂಲಭೂತ ಸೌಕರ್ಯಕ್ಕೆ ಅಗತ್ಯವಿರುವ 3.50 ಕೋಟಿ ರೂ. ಅನುದಾನವನ್ನು ಮುಂದಿನ ಸಾಲಿನ ಆಯವ್ಯಯದಲ್ಲಿ ಮೀಸಲಿಡಲು ಬದ್ಧನಾಗಿರುವುದಾಗಿ ತಿಳಿಸಿದ್ದೇನೆ ಎಂದರು. ಈ ಸಂದರ್ಭ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ’ಸೋಜಾ ಉಪಸ್ಥಿತರಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.