ನವದೆಹಲಿ: ಭಾರತದ ರಾಷ್ಟ್ರೀಯ ವಿಮಾನಯಾನ ಇಂಡಿಗೋ 2020ರ ಡಿಸೆಂಬರ್ವರೆಗೆ ವೈದ್ಯರಿಗೆ ಮತ್ತು ದಾದಿಯರಿಗೆ ವಿಮಾನ ದರದಲ್ಲಿ ಶೇಕಡಾ 25ರಷ್ಟು ರಿಯಾಯಿತಿಯನ್ನು ಘೋಷಿಸಿದೆ. ಈ ನಿರ್ಧಾರವನ್ನು ಜುಲೈ 1ರಂದು ಘೋಷಿಸಲಾಗಿದ್ದು, ಇಂಡಿಗೋ ವೆಬ್ಸೈಟ್ ಮೂಲಕ ಮಾಡಿದ ಬುಕಿಂಗ್ಗೆ ಮಾನ್ಯವಾಗಿರಲಿದೆ.
ಅಧಿಕೃತ ಹೇಳಿಕೆಯಲ್ಲಿ, “ನಮ್ಮ ವೈದ್ಯಕೀಯ ವೃತ್ತಿಪರರು ನೀಡುವ ನಿಸ್ವಾರ್ಥ ಬೆಂಬಲಕ್ಕೆ ಕೃತಜ್ಞತೆಯ ಸಂಕೇತವಾಗಿ, ನಾವು ಫ್ಲೈಟ್ ಬುಕಿಂಗ್ನಲ್ಲಿ 25% ರಿಯಾಯಿತಿಯನ್ನು ನೀಡುತ್ತಿದ್ದೇವೆ” ಎಂದಿದೆ.
“ವೈದ್ಯರು ಮತ್ತು ದಾದಿಯರಿಗೆ ರಿಯಾಯಿತಿ ಅನ್ವಯವಾಗುತ್ತದೆ, ದರದಲ್ಲಿ 25% ವರೆಗೆ ರಿಯಾಯಿತಿ ನೀಡಲಾಗುತ್ತದೆ. ನಮ್ಮ ವೆಬ್ಸೈಟ್ ಮೂಲಕ ಮಾಡಿದ ಬುಕಿಂಗ್ನಲ್ಲಿ ರಿಯಾಯಿತಿ ಮಾನ್ಯವಾಗಿರುತ್ತದೆ. ಚೆಕ್-ಇನ್ ಸಮಯದಲ್ಲಿ ಐಡಿ ಪ್ರೂಫ್ ಒದಗಿಸುವುದು ಕಡ್ಡಾಯವಾಗಿದೆ ಮತ್ತು ಇದಕ್ಕೆ ವಿಫಲವಾಗಿದೆ ಬೋರ್ಡಿಂಗ್ ನಿರಾಕರಣೆ ಮಾಡಲಾಗುತ್ತದೆ” ಎಂದು ಇಂಡಿಗೋ ಸ್ಪಷ್ಟಪಡಿಸಿದೆ.
ಚೆಕ್-ಇನ್ ಸಮಯದಲ್ಲಿ ವೈದ್ಯರು, ದಾದಿಯರು ಮಾನ್ಯ ವೈದ್ಯಕೀಯ ಮಂಡಳಿ (ಎಂಸಿಐ) ಅಥವಾ ವೈದ್ಯರಿಗಾಗಿ ರಾಜ್ಯ ವೈದ್ಯಕೀಯ ಮಂಡಳಿ ನೀಡಿರುವ ನೋಂದಣಿ ಸಂಖ್ಯೆಯನ್ನು ಬುಕಿಂಗ್ ಸಮಯದಲ್ಲಿ ಸಲ್ಲಿಸಬೇಕು ಮತ್ತು ನೋಂದಣಿ ಪ್ರಮಾಣಪತ್ರದ ಮೂಲ / ಸ್ವಯಂ-ದೃಢೀಕರಿಸಿದ ಪ್ರತಿ ಜೊತೆಗೆ ಫೋಟೋ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.