ಕೋಟ : ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಸಂತೆ ಮಾರುಕಟ್ಟೆ ಬಳಿ ಸುಮಾರು 71 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಹಿಳಾ ಮೀನು ಮಾರುಕಟ್ಟೆಗೆ ಇಂದು ನಗರಾಭಿವೃಧ್ಧಿ ಸಚಿವ ವಿನಯ್ ಕುಮಾರ್ ಸೊರೆಕೆ ಲೋಕಾರ್ಪಣೆಗೊಳಿಸಲ್ಲಿದ್ದಾರೆ.
ಆದರೇ ಈ ಮಾರುಕಟ್ಟೆ ನಿರ್ಮಾಣಕ್ಕೆ ಅಂದಾಜು ಪಟ್ಟಿಯಲ್ಲಿ ಕಾಣಿಸಲಾದ ಕಾಮಗಾರಿ ಅಪೂರ್ಣವಾಗಿದ್ದು ಯಾವುದೇ ಮೂಲಸೌಕರ್ಯ ಒದಗಿಸದೇ ಉಧ್ಘಾಟನೆ ನಡೆಸುತ್ತಿರುವುದನ್ನು ವಿರೋಧಿಸಿ ಸ್ಥಳೀಯರನ್ನೊಡಗೂಡಿ ಕೆಲವು ಜನಪ್ರತಿನಿಧಿಗಳು ಇದೇ ವೇಳೆ ಪ್ರತಿಭಟನೆ ನಡೆಸಲಿದ್ದಾರೆ. ನೆನೆಗುದಿಗೆ ಬಿದ್ದಿದ್ದ ಕೋಟ ಮೀನು ಮಾರುಕಟ್ಟೆಗೆ ಆಗಿನ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಮಿನುಗಾರಿಕಾ ಫೆಡರೇಶನ್ ಮತ್ತು ಕರಾವಳಿ ಪ್ರಾಧಿಕಾರದ ಮುಂದಾಳತ್ವದಲ್ಲಿ ಶಿಲಾನ್ಯಾಸ ಕೈಗೊಂಡಿದ್ದು ಆ ಕಾಮಗಾರಿ ಇಂದಿಗೂ ನಿಧಾನಗತಿಯಲ್ಲಿ ಸಾಗುತ್ತಿತ್ತು. ಇತ್ತಿಚಿನ ದಿನಗಳಲ್ಲಿ ಕೋಟ ಗ್ರಾಮಪಂಚಾಯತ್ನ ವಿಶೇಷ ಮುತುವರ್ಜಿಯಿಂದ ಕಾಮಗಾರಿ ಸಲ್ಪ ಪ್ರಮಾಣ ವೇಗ ದೊರಯಿತಾದರೂ ಕಾಮಗಾರಿ ಪೂರ್ಣಗೊಳ್ಳದೆ ಇದೀಗ ಇಂದು ಮಧ್ಯಾಹ್ನ ಉದ್ಘಾಟನೆಗೆ ಅಣಿಯಾಗುತ್ತಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶವನ್ನುಂಟು ಮಾಡಿದೆ.
ಕೋಟದ ಮಹಿಳಾ ಮೀನು ಮಾರುಕಟ್ಟೆಗೆ ಒಟ್ಟು 71 ಲಕ್ಷ ರೂ ಕಾಮಗಾರಿ ಆದರೆ ಇಲ್ಲಿ ಆಗಿರುವುದು ಬರೇ ನಲವತ್ತು ಲಕ್ಷ ಕಾಮಗಾರಿ ಆಗಿದೆ. ಇನ್ನೂ ಹಲವು ಕಾಮಗಾರಿಗಳು ನಡೆಯಬೇಕಿದೆ. ಅಲ್ಲದೆ ಉದ್ಘಾಟನೆಗೊಳ್ಳುತ್ತಿರುವ ಈ ಮಾರುಕಟ್ಟೆಯಲ್ಲಿ ಮುಖ್ಯವಾಗಿ ಬೇಕಿರುವ ತ್ಯಾಜ್ಯ ನೀರು ವಿಲೆವಾರಿಗೆ ಸೂಕ್ತ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ರಸ್ತೆ ವ್ಯವಸ್ಥೆ ಮಾಡದಿರುವುದು ಹಾಗೂ ಇನ್ನಿತರ ಕೆಲಸಗಳು ಸಮರ್ಪಕವಾಗಿ ಆಗದಿರುವುದಕ್ಕೆ ಸಾರ್ವಜನಿಕರೊಡಗೊಡಿ ನಾಳೆ ಪ್ರತಿಭಟನೆ ಹಮ್ಮಿಕೊಂಡಿದ್ದವೆ ಎಂದು ತಾಲ್ಲೂಕು ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.