ನವದೆಹಲಿ:ವಿಶ್ವದ ಮೊಟ್ಟ ಮೊದಲ ಪ್ರೋಗ್ರಾಮಿಂಗ್ ಮತ್ತು ಡಾಟಾ ಸೈನ್ಸ್ನಲ್ಲಿ ಆನ್ಲೈನ್ ಬಿ.ಎಸ್ಸಿ ಪದವಿಯನ್ನು ವರ್ಚುವಲ್ ಆಗಿ ಮಂಗಳವಾರ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಅವರು ಆರಂಭಿಸಿದ್ದಾರೆ. ಈ ಪದವಿಯನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (ಐಐಟಿ ಮದ್ರಾಸ್) ಸಿದ್ಧಪಡಿಸಿದೆ ಮತ್ತು ನೀಡುತ್ತದೆ. ಐಐಟಿ ಮದ್ರಾಸ್ ಎನ್ಐಆರ್ಎಫ್ ನೀಡಿದ ಭಾರತ ಶ್ರೇಯಾಂಕ 2020ರಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ.
ಹನ್ನೆರಡನೇ ತರಗತಿಯಲ್ಲಿ ಉತ್ತೀರ್ಣರಾದ, ಇಂಗ್ಲಿಷ್ ಮತ್ತು ಗಣಿತದೊಂದಿಗೆ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಮತ್ತು ಯಾವುದೇ ಆನ್-ಕ್ಯಾಂಪಸ್ ಯುಜಿ ಕೋರ್ಸ್ಗೆ ಸೇರ್ಪಡೆಗೊಂಡವರಿಗೆ ಈ ಪ್ರೋಗ್ರಾಮಿಂಗ್ ಮತ್ತು ಡಾಟಾ ಸೈನ್ಸ್ ಪದವಿ ಮುಕ್ತವಾಗಿದೆ.
ಡಾಟಾ ಸೈನ್ಸ್ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದೆ, ಈ ಕ್ಷೇತ್ರ 2026ರ ವೇಳೆಗೆ 11.5 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಊಹಿಸಲಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಆನ್ಲೈನ್ ಶಿಕ್ಷಣವು ದೊಡ್ಡ ಪ್ರಮಾಣದಲ್ಲಿ ವೇಗವಾಗಿ ಸ್ವೀಕರಿಸಲ್ಪಡುತ್ತಿದೆ. ಐಐಟಿ ಮದ್ರಾಸ್ನ ಅಧ್ಯಾಪಕರು ಆನ್ಲೈನ್ ಶಿಕ್ಷಣ ಪ್ರಕ್ರಿಯೆಯನ್ನು ಬಳಸಿ ಈ ಕ್ಷೇತ್ರದ ಅಗತ್ಯತೆಯನ್ನು ಪೂರೈಸುತ್ತಿದ್ದಾರೆ ಮತ್ತು ಅಂತರ್ಗತ ಮತ್ತು ಕೈಗೆಟುಕುವ ಶಿಕ್ಷಣ ಮಾದರಿಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದು ಐಐಟಿಯ ವ್ಯಾಪ್ತಿಯನ್ನು ಕ್ಷಿಪ್ರವಾಗಿ ವಿಸ್ತರಿಸಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ವಿಶ್ವದ ಮೊಟ್ಟಮೊದಲ ಡೇಟಾ ಸೈನ್ಸ್ ಮತ್ತು ಪ್ರೊಗ್ರಾಮಿಂಗ್ನಲ್ಲಿ ಆನ್ಲೈನ್ ಬಿ.ಎಸ್ಸಿ ಪದವಿ ಪ್ರಾರಂಭಿಸಿದ್ದಕ್ಕಾಗಿ ಐಐಟಿ ಮದ್ರಾಸ್ ತಂಡವನ್ನು ಸಚಿವ ಪೋಖ್ರಿಯಾಲ್ ಅವರು ಅಭಿನಂದಿಸಿದರು. ಹನ್ನೆರಡನೇ ತರಗತಿ ಪೂರೈಸುತ್ತಿರುವ ಪ್ರಸ್ತುತ ಬ್ಯಾಚ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದು ಸಚಿವರು ಹೇಳಿದ್ದಾರೆ.
“ಪದವೀಧರರು ಮತ್ತು ಕೆಲಸ ಮಾಡುವ ವೃತ್ತಿಪರರು ಸಹ ಈ ಪದವಿಯನ್ನು ಕೈಗೆತ್ತಿಕೊಳ್ಳಬಹುದು. ಐಐಟಿಯ ಈ ವಿಶಿಷ್ಟ ಕೊಡುಗೆಯು ವಯಸ್ಸು, ಶಿಸ್ತು ಅಥವಾ ಭೌಗೋಳಿಕ ಸ್ಥಳದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿದೆ ಮತ್ತು ನುರಿತ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯಿರುವ ದತ್ತಾಂಶ ವಿಜ್ಞಾನದಲ್ಲಿ ವಿಶ್ವ ದರ್ಜೆಯ ಪಠ್ಯಕ್ರಮಕ್ಕೆ ಪ್ರವೇಶವನ್ನು ಒದಗಿಸುತ್ತದೆ” ಎಂದು ಪೋಖ್ರಿಯಾಲ್ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.