
ನವದೆಹಲಿ: ಕೇಂದ್ರ ಸರ್ಕಾರವು ಜೂನ್ 29ರಂದು ಟಿಕ್ಟಾಕ್ ಸೇರಿದಂತೆ 59 ಚೈನೀಸ್ ಆ್ಯಪ್ಗಳನ್ನು ನಿಷೇಧಿಸಿದೆ. ಇದರ ನಂತರ, ಚೀನಾದ ಕಿರು-ವಿಡಿಯೋ ಶೇರಿಂಗ್ ಆ್ಯಪ್ ಟಿಕ್ಟಾಕ್ಗೆ ಪರ್ಯಾಯ ಎಂದು ಹೇಳಲಾಗುತ್ತಿರುವ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಚಿಂಗಾರಿ ಆ್ಯಪ್ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಬೆಳವಣಿಗೆಯನ್ನು ಕಾಣುತ್ತಿದೆ. ಗಂಟೆಗೆ 3-4 ಲಕ್ಷ ಡೌನ್ಲೋಡ್ಗಳನ್ನು ಇದು ದಾಖಲಿಸುತ್ತಿದೆ.
ಜೂನ್ 30ರಂದು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಚಿಂಗಾರಿ ಆ್ಯಪ್ನ ಸಹ ಸಂಸ್ಥಾಪಕ ಸುಮಿತ್ ಘೋಷ್ ಅವರು, ಚೀನಾದ ಅಪ್ಲಿಕೇಶನ್ಗಳ ನಿಷೇಧದ ನಂತರ ಚಿಂಗಾರಿ ಅಪ್ಲಿಕೇಶನ್ ಪ್ರತಿ ಗಂಟೆಗೆ 3-4 ಲಕ್ಷ ಡೌನ್ಲೋಡ್ಗಳನ್ನು ನೋಂದಾಯಿಸುತ್ತಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ.
“ನಾವು ಇದೀಗ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದ್ದೇವೆ” ಎಂದು ಘೋಷ್ ಹೇಳಿದ್ದಾರೆ.
ಚೀನಾದ ಅಪ್ಲಿಕೇಶನ್ಗಳನ್ನು ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ ಘೋಷ್, ಈ ಚೀನೀ ಅಪ್ಲಿಕೇಶನ್ಗಳು ಭಾರತೀಯ ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತಿವೆ ಮತ್ತು ಅದನ್ನು ಚೀನಾದಲ್ಲಿನ ಸರ್ವರ್ಗಳಿಗೆ ಭಾರತೀಯರ ಅನುಮತಿಯಿಲ್ಲದೆ ಕಳುಹಿಸುತ್ತಿವೆ ಎಂದು ಹೇಳಿದ್ದಾರೆ.
ಈ ಅಪ್ಲಿಕೇಶನ್ಗಳು ಬಳಕೆದಾರರಿಗೆ ಗೊತ್ತಿಲ್ಲದೆ ಅವರ ಡೇಟಾವನ್ನು ಚೀನೀ ಸರ್ವರ್ಗಳಿಗೆ ಕಳುಹಿಸುವ ಮೂಲಕ ಅವರ ಗೌಪ್ಯತೆ ಹಕ್ಕುಗಳನ್ನು ಉಲ್ಲಂಘಿಸಿವೆ ಎಂದು ಅವರು ಹೇಳಿದ್ದಾರೆ.
ಮುಂಬರುವ ತಿಂಗಳುಗಳಲ್ಲಿ ಟಿಕ್ಟಾಕ್ಗೆ ಪರ್ಯಾಯವನ್ನು ನಿರ್ಮಿಸಲು ಭಾರತವು ಸಾಕಷ್ಟು ತಾಂತ್ರಿಕ ಪ್ರತಿಭೆಗಳನ್ನು ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.
ಚಿಂಗಾರಿ ಇದುವರೆಗೆ 35 ಲಕ್ಷ ಡೌನ್ಲೋಡ್ಗಳಿಗೆ ಸಾಕ್ಷಿಯಾಗಿದೆ ಎಂದು ಆ್ಯಪ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ತಿಳಿಸಿದೆ.
ಈ ಅಪ್ಲಿಕೇಶನ್ ಅನ್ನು ಕ್ರಮವಾಗಿ ಛತ್ತೀಸ್ಗಢ, ಒರಿಸ್ಸಾ ಮತ್ತು ಕರ್ನಾಟಕದ ಮೊಬೈಲ್ ಅಪ್ಲಿಕೇಷನ್ ಡೆವಲಪರ್ಗಳಾದ ಸುಮಿತ್ ಘೋಷ್, ಬಿಸ್ವತ್ಮಾ ನಾಯಕ್ ಮತ್ತು ಸಿದ್ಧಾರ್ಥ್ ಗೌತಮ್ ಅಭಿವೃದ್ಧಿಪಡಿಸಿದ್ದಾರೆ.
ಚಿಂಗಾರಿಯಲ್ಲಿ ಟ್ರೆಂಡಿಂಗ್ ನ್ಯೂಸ್, ಮನರಂಜನಾ ಸುದ್ದಿ, ತಮಾಷೆಯ ವೀಡಿಯೊಗಳು, ವಿಡಿಯೋ ಹಾಡುಗಳು, ಶುಭಾಶಯಗಳು, ಪ್ರೇಮ ಉಲ್ಲೇಖಗಳು, ವಾಟ್ಸಾಪ್ ಸ್ಟೇಟಸ್ ವೀಡಿಯೊಗಳು ಮುಂತಾದ ವೈಶಿಷ್ಟ್ಯಗಳಿವೆ ಮತ್ತು 10,000ಕ್ಕೂ ಹೆಚ್ಚು ಜನರು ಪ್ರತಿದಿನ ಈ ಪ್ಲಾಟ್ಫಾರ್ಮ್ ಬಳಸಿ ಮನರಂಜನೆಯ ವಿಷಯವನ್ನು ತಯಾರಿಸುತ್ತಿದ್ದಾರೆ.
#ChineseAppsBanned – Listen in to what @sumitgh85 (Co-founder, Chingari) had to say.
Watch #ChinaFiles with @shreyadhoundial pic.twitter.com/9CVnGmH6Yp
— CNNNews18 (@CNNnews18) June 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


