ನವದೆಹಲಿ: ಉತ್ತಮ ಅಂಕ ಪಡೆದ ಪ್ರತಿಭಾನಿತ್ವ ಮಕ್ಕಳಿಗೆ ಉತ್ತರಪ್ರದೇಶ ಸರ್ಕಾರ ಭರ್ಜರಿ ಗಿಫ್ಟ್ ಅನ್ನು ನೀಡಿದೆ. ನಗದು ಬಹುಮಾನ, ಲ್ಯಾಪ್ಟಾಪ್ ನೀಡುವುದರ ಜೊತೆಗೆ ಅವರ ಮನೆಗಳಿಗೆ ರಸ್ತೆ ಸಂಪರ್ಕ ನೀಡುವುದಾಗಿಯೂ ಘೋಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಉತ್ತರ ಪ್ರದೇಶದ ಮಾಧ್ಯಮಿಕ ಮಂಡಳಿ 10 ಮತ್ತು 12 ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ. ಯುಪಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಲಕ್ನೋದ ಲೋಕ ಭವನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಫಲಿತಾಂಶಗಳನ್ನು ಘೋಷಿಸಿದರು. ಫಲಿತಾಂಶಗಳನ್ನು ಘೋಷಿಸಿದ ನಂತರ ಉತ್ತಮ ಅಂಕ ಪಡೆದ ಮಕ್ಕಳಿಗೆ ನಗದು ಬಹುಮಾನ ಮತ್ತು ಶ್ರೇಷ್ಠ ಮಕ್ಕಳಿಗೆ ಲ್ಯಾಪ್ಟಾಪ್ಗಳನ್ನು ಘೋಷಿಸಿದರು.
“ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಪ್ರತಿಭಾನ್ವಿತ ಮಕ್ಕಳಿಗೆ 1 ಲಕ್ಷ ರೂ. ನಗದು, ಲ್ಯಾಪ್ಟಾಪ್ ನೀಡಲಾಗುತ್ತದೆ ಮತ್ತು ನಾವು ಅವರ ಮನೆಗಳಿಗೆ ರಸ್ತೆ ನಿರ್ಮಿಸುತ್ತೇವೆ” ಎಂದು ಶರ್ಮಾ ಹೇಳಿದರು.
ಮಂಡಳಿಯು ನಡೆಸಿದ ಪ್ರೌಢl ಶಾಲೆ (10ನೇ) ಮತ್ತು ಮಾಧ್ಯಮಿಕ (12ನೇ) ಪರೀಕ್ಷೆಗಳಿಗೆ 56.10 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು ಮತ್ತು ಅವರಲ್ಲಿ 52.57 ಲಕ್ಷಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು.
ಉತ್ತಮ ಅಂಕ ಪಡೆದ ಮಕ್ಕಳ ಮನೆಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸರ್ಕಾರದ ನಿರ್ಧಾರ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.