ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ 4 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರ ಕಚೇರಿ ಟ್ವೀಟ್ ಮಾಡಿದೆ. ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಘರ್ಷಣೆ ಮತ್ತು ಕೊರೋನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಮೋದಿ ಅವರ ಭಾಷಣವು ಭಾರೀ ಕುತೂಹಲವನ್ನು ಮೂಡಿಸಿದೆ.
ತಮ್ಮ ʼಮನ್ ಕೀ ಬಾತ್ʼ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದ ವಿರುದ್ಧ ಹೋರಾಡಿದ ಯೋಧರನ್ನು ಶ್ಲಾಘಿಸಿದ್ದರು. ಲಡಾಖ್ನಲ್ಲಿ ಚೀನಾಕ್ಕೆ ಭಾರತ ಸೂಕ್ತ ಪ್ರತಿಕ್ರಿಯೆ ನೀಡಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದರು. ವ್ಯಾಪಾರಿಗಳು ಮತ್ತು ನಾಗರಿಕ ಸಮಾಜದಿಂದ ಚೀನಾ ಸರಕುಗಳನ್ನು ಬಹಿಷ್ಕರಿಸುವ ಕರೆ ಕುರಿತೂ ಅವರು ಉಲ್ಲೇಖ ಮಾಡಿದ್ದರು.
ಇದೀಗ ಭಾರತದಲ್ಲಿ ಚೀನಿ ವ್ಯಾಪಾರ ಸಾಮ್ರಾಜ್ಯದ ಮೇಲೆ ಭಾರತ ದೊಡ್ಡ ಹೊಡೆತವನ್ನು ನೀಡಲಾರಂಭಿಸಿದೆ. ಟಿಕ್ಟಾಕ್, ವೀಚಾಟ್ ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಚೀನಾದ ಒಡೆತನದ ಮೊಬೈಲ್ ಅಪ್ಲಿಕೇಶನ್ಗಳನ್ನು ನಿರ್ಬಂಧಿಸುವ ನಿರ್ಧಾರವನ್ನು ಕೇಂದ್ರ ಸೋಮವಾರ ಪ್ರಕಟಿಸಿದೆ.
ದೇಶದ ಸಾರ್ವಭೌಮತೆ ಮತ್ತು ಏಕೀಕರಣಕ್ಕೆ ಧಕ್ಕೆ ತರುವ ಮಾಹಿತಿಗಳು ಸಿಗುತ್ತಿರುವ ಹಿನ್ನಲೆಯಲ್ಲಿ ಈ ಅಪ್ಲಿಕೇಶನ್ಗಳನ್ನು ನಿಷೇಧ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪ್ರಧಾನಿ ಇಂದು ಯಾವ ವಿಷಯದ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಕುತೂಹಲ ಪ್ರತಿ ಭಾರತೀಯರಿಗೂ ಇದೆ. ಪ್ರತಿ ಬಾರಿಯೂ ಮಹತ್ವದ ಸಂಗತಿಗಳು ಇದ್ದರಷ್ಟೇ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಈ ಬಾರಿ ಅಂತಹ ಮಹತ್ವದ ಸಂಗತಿ ಯಾವುದು ಎಂಬ ಬಗ್ಗೆ ಕಾದು ನೋಡಬೇಕಷ್ಟೇ.
Prime Minister @narendramodi will address the nation at 4 PM tomorrow.
— PMO India (@PMOIndia) June 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.