ಪಾಟ್ನಾ: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿಹಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ವಿವಿಧ ಕಾರ್ಯಗಳನ್ನು ಉದ್ಘಾಟನೆಗೊಳಿಸಿದರು. ಪಾಟ್ನಾಗೆ ಬಂದಿಳಿದ ಅವರನ್ನು ಅವರ ರಾಜಕೀಯ ವೈರಿ ಎಂದೇ ಗುರುತಿಸಲ್ಪಡುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ವಾಗತ ಕೋರಿದರು.
ಪಾಟ್ನಾ ಐಐಟಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದ ಸಮಗ್ರ ಅಭಿವೃದ್ಧಿಗೆ ರಾಜ್ಯಗಳ ಅಭಿವೃದ್ಧಿ ಮುಖ್ಯ. ಈ ದೇಶದ ಎಲ್ಲಾ ಸಮಸ್ಯೆಗಳಿಗೂ ಅಭಿವೃದ್ಧಿಯೇ ಉತ್ತರ. ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದರೆ ದೇಶದ ಅಭಿವೃದ್ಧಿ ಕಷ್ಟಸಾಧ್ಯವಲ್ಲ’ ಎಂದರು.
ಬಳಿಕ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಬಿಹಾರಕ್ಕೆ ಶೀಘ್ರದಲ್ಲೇ ೫೦೦ ಕೋಟಿ ರೂಪಾಯಿ ಪ್ಯಾಕೇಜ್ ನೀಡಲಿದ್ದೇವೆ. ಆದರೆ ಆ ಬಗ್ಗೆ ಈ ವೇದಿಕೆಯಲ್ಲಿ ಘೋಷಣೆ ಮಾಡುವುದಿಲ್ಲ. ನನಗೆ ನಾನು ನೀಡಿದ ಭರವಸೆಗಳ ಬಗ್ಗೆ ನನಪಿದೆ, ಅದನ್ನು ನಾನು ಈಡೇರಿಸಿಯೇ ಈಡೇರಿಸುತ್ತೇನೆ’ ಎಂದರು.
ಜಂಗಲ್ ರಾಜ್ನ್ನು ಕಿತ್ತೆಸೆಯಲು ಈ ಚುನಾವಣೆಗೆ ನಿಮಗೊಂದು ಅವಕಾಶ, ಆರ್ಜೆಡಿ ಎಂದರೇ ’ರೋಝಾನ ಜಂಗಲ್ರಾಜ್ ಡರ್’ ಎನ್ನುವ ಮೂಲಕ ಲಾಲೂ ಪ್ರಸಾದ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ದೆಹಲಿಯಲ್ಲಿ ಕೂತೇ ನಾನು ಬಿಹಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.