ನವದೆಹಲಿ: ಎರಡನೇ ಮಹಾಯುದ್ಧದಲ್ಲಿ ಅಪ್ರತಿಮ ಸಾಹಸ ಮತ್ತು ಶೌರ್ಯವನ್ನು ತೋರಿಸಿರುವ ಉತ್ತರಾಖಂಡದ ಪಿಥೋರಗಢ್ ಜಿಲ್ಲೆಯ ಭಾರತೀಯ ಸೈನಿಕನಿಗೆ ರಷ್ಯಾ ಗೌರವ ಸಲ್ಲಿಸಿದೆ. ಮಾಸ್ಕೋದಲ್ಲಿನ ರಷ್ಯನ್ ಆರ್ಮಿ ಮ್ಯೂಸಿಯಂ ಗ್ಯಾಲರಿಯಲ್ಲಿ ಯೋಧನ ಭಾವಚಿತ್ರ ಮತ್ತು ಫಲಕವನ್ನು ಇಟ್ಟಿದೆ.
1944 ರಲ್ಲಿ ಅಂದಿನ ಸೋವಿಯತ್ ಆಡಳಿತದಿಂದ ಹವಾಲ್ದರ್ ಗಜೇಂದ್ರ ಸಿಂಗ್ ಅವರಿಗೆ ಪ್ರತಿಷ್ಠಿತ ‘ಆರ್ಡರ್ ಆಫ್ ದಿ ರೆಡ್ ಸ್ಟಾರ್’ ನೀಡಲಾಗಿತ್ತು. ಇದೀಗ ಅವರಿಗೆ ರಷ್ಯಾ ಗೌರವಾರ್ಪಣೆ ಮಾಡಿದೆ. ತಮಿಳುನಾಡಿನಿಂದ ಬಂದ ಮತ್ತೊಬ್ಬ ಭಾರತೀಯ ಸೈನಿಕ ಕೂಡ ‘ಆರ್ಡರ್ ಆಫ್ ದಿ ರೆಡ್ ಸ್ಟಾರ್’ ಗೌರವಕ್ಕೆ ಪಾತ್ರರಾಗಿದ್ದರು.
ರಷ್ಯಾದ ಭಾರತೀಯ ರಾಯಭಾರಿ ಡಿ.ಬಿ.ವೆಂಕಟೇಶ್ ವರ್ಮಾ ಅವರು ಸೈನಿಕರ ಕುಟುಂಬಕ್ಕೆ ಪತ್ರವೊಂದನ್ನು ಬರೆದು ಈ ವಿಷಯವನ್ನು ತಿಳಿಸಿದ್ದಾರೆ ಮತ್ತು ರಾಷ್ಟ್ರಕ್ಕೆ ಬಹಳ ಹೆಮ್ಮೆಯ ವಿಷಯ ಇದು ಎಂದು ಬಣ್ಣಿಸಿದ್ದಾರೆ. ಭಾರತ ಮತ್ತು ರಷ್ಯಾ ನಡುವಿನ ಬಲವಾದ ಸ್ನೇಹಕ್ಕೂ ಇದು ಸಾಕ್ಷಿಯಾಗಿದೆ.
ಹವಾಲ್ದಾರ್ ಸಿಂಗ್ ಅವರ ಪುತ್ರ ಭಗವಾನ್ ಸಿಂಗ್ ಈ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಹವಲ್ದಾರ್ ಸಿಂಗ್ ಅವರು ತಮ್ಮ ಹೆಚ್ಚಿನ ಸಮಯವನ್ನು ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ (ಎನ್ಡಬ್ಲ್ಯುಎಫ್ಪಿ) ಸೇವೆ ಸಲ್ಲಿಸುತ್ತಾ ಕಳೆದಿದ್ದಾರೆ. ಅದು ಈಗ ಪಾಕಿಸ್ಥಾನದ ಖೈಬರ್ ಪಖ್ತುನ್ಖ್ವಾ ಪ್ರದೇಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.