
ನವದೆಹಲಿ: ಭಾರತದ ಅತಿದೊಡ್ಡ ಅಡುಗೆ ಸಲಕರಣೆಗಳ ತಯಾರಕ ಟಿಟಿಕೆ ಪ್ರೆಸ್ಟೀಜ್ ಚೀನಾದಿಂದ ಯಾವುದೇ ಆಮದುಗಳನ್ನು ಮಾಡದಿರಲು ನಿರ್ಧರಿಸಿದೆ. ಈ ಮೂಲಕ ಚೀನಾ ಆಮದಿನ ವಿರುದ್ಧ ರಾಷ್ಟ್ರವ್ಯಾಪಿಯಾಗಿ ಎದ್ದಿರುವ ಕೂಗಿಗೆ ಧ್ವನಿಗೂಡಿಸಿದೆ. ಚೀನಾದಿಂದ ವಸ್ತುಗಳನ್ನು ಮತ್ತು ಬಿಡಿ ಭಾಗಗಳನ್ನು ಖರೀದಿಸಲು ಯಾವುದೇ ಹೊಸ ಆದೇಶಗಳನ್ನು ನೀಡುವುದಿಲ್ಲ ಎಂದು ಕಂಪನಿ ಘೋಷಿಸಿದೆ ಎಂದು ವರದಿಗಳು ತಿಳಿಸಿವೆ.
ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಟಿಟಿಕೆ ಪ್ರೆಸ್ಟೀಜ್ ಮುಖ್ಯಸ್ಥ ಟಿಟಿ ಜಗನ್ನಾಥನ್ ಅವರು, ತಮ್ಮ ಕಂಪನಿಯು ಸೆಪ್ಟೆಂಬರ್ 30ರ ಹೊತ್ತಿಗೆ ಚೀನಾದಿಂದ ಯಾವುದೇ ಬಿಡಿ ಭಾಗಗಳನ್ನು ಅಥವಾ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪೂರ್ವ ಲಡಾಕ್ ಪ್ರದೇಶದ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್ಎಸಿ) ಉದ್ದಕ್ಕೂ ಜೂನ್ 15-16ರ ಮಧ್ಯರಾತ್ರಿ 20 ಭಾರತೀಯ ಸೈನಿಕರ ಹುತಾತ್ಮತೆಗೆ ಚೀನಾ ಕಾರಣವಾಗಿತ್ತು, ಹೀಗಾಗಿ ಕಂಪನಿಯು ಈ ದೃಢ ನಿರ್ಧಾರವನ್ನು ಮಾಡಿದೆ. ದೇಶದ ಕೂಗಿನೊಂದಿಗೆ ಈ ನಿರ್ಧಾರವು ಒಗ್ಗಟ್ಟಿನ ಪ್ರದರ್ಶನವಾಗಿದೆ ಎಂದು ಜಗನ್ನಾಥನ್ ಹೇಳಿದ್ದಾರೆ.
ತಮ್ಮ ಕಂಪನಿಯು ಚೀನಾವನ್ನು ಅವಲಂಬಿಸಿರುವ ವಸ್ತುಗಳನ್ನು ಸ್ಥಳೀಯವಾಗಿ ಉತ್ಪಾದಿಸುತ್ತದೆ, ಇಲ್ಲದಿದ್ದರೆ ವಿಯೆಟ್ನಾಂ ಅಥವಾ ಟರ್ಕಿಯಂತಹ ಇತರ ಮಾರುಕಟ್ಟೆಗಳಿಂದ ಖರೀದಿಸಲು ಮುಂದಾಗುತ್ತದೆ ಎಂದಿದ್ದಾರೆ.
ಟಿಟಿಕೆ ಪ್ರೆಸ್ಟೀಜ್ ಕಂಪನಿಯು ತನ್ನ ಮೂರನೇ ಒಂದು ಭಾಗದಷ್ಟು ಭಾಗಗಳನ್ನು ಅಥವಾ ಸಲಕರಣೆಗಳನ್ನು ಚೀನಾದಿಂದ ಖರೀದಿ ಮಾಡುತ್ತದೆ ಎಂಬ ಅಂಶವನ್ನು ಗಮನಿಸಿದರೆ ಕಂಪನಿಯು ಈಗ ತೆಗೆದುಕೊಂಡಿರುವ ನಿರ್ಧಾರ ಮಹತ್ವವನ್ನು ಪಡೆದುಕೊಂಡಿದೆ. ಈಗಾಗಲೇ ಕಂಪನಿಯು ತನ್ನ ಚೀನಾ ಆಮದಿನ ಪ್ರಮಾಣವನ್ನು ಶೇ.10ರಷ್ಟು ಇಳಿಸಿದೆ ಮತ್ತು ಈಗ ಸಂಪೂರ್ಣವಾಗಿ ಚೀನಾ ಆಮದನ್ನು ತೊಡೆದುಹಾಕಲು ಸಜ್ಜಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


