ಮುಂಬೈ: ಮುಂಬೈ ಸರಣಿ ಬಾಂಬ್ ದಾಳಿ ನಡೆಸಿ ಸೆರೆಸಿಕ್ಕು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 55 ವರ್ಷದ ಉಗ್ರ ಯೂಸುಫ್ ಮೆಮೊನ್ ಹೃದಯಾಪಘಾತದಿಂದ ಇಂದು ಮುಂಜಾನೆ ನಾಸಿಕ್ ಕೇಂದ್ರ ಕಾರಾಗೃಹದಲ್ಲಿ ಮೃತಪಟ್ಟಿದ್ದಾನೆ.
1993 ರಲ್ಲಿ ಮುಂಬೈನಲ್ಲಿ ಸರಣಿ ಸ್ಪೋಟಗಳನ್ನು ನಡೆಸಿದ ಯೂಸುಫ್ ಮೆಮೊನ್, ಆತನ ಸಹೋದರ ಇಸಾನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅದರಂತೆ ಅವರಿಬ್ಬರನ್ನೂ ನಾಸಿಕ್ನ ಕೇಂದ್ರ ಕಾರಾಗೃಹ ದಲ್ಲಿ ಬಂಧನದಲ್ಲಿ ಇರಿಸಲಾಗಿದ್ದು, ಇಂದು ಬೆಳಗ್ಗೆ ಯೂಸುಫ್ ಮೃತಪಟ್ಟಿರುವುದಾಗಿ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಜಾನೆ 10 ಗಂಟೆಯ ವೇಳೆಗೆ ಹಲ್ಲುಜ್ಜುವ ಸಂದರ್ಭದಲ್ಲಿ ಕುಸಿದು ಬಿದ್ದ ಯೂಸುಫ್ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆಂದು ಕರೆದುಕೊಂಡು ಹೋಗಲಾಗಿದ್ದು , ಚಿಕಿತ್ಸಾ ವೇಳೆಯಲ್ಲಿ ಆತ ಕೊನೆಯುಸಿರೆಳೆದಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇನ್ನು ಈ ದಾಳಿಯ ಸಂಚುಕೋರ, ಯೂಸುಫ್ ನ ಮತ್ತೋರ್ವ ಸಹೋದರ ಟೈಗರ್ ಮೆಮೊನ್ ಪಾಕಿಸ್ಥಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಇನ್ನೋರ್ವ ಸಹೋದರನನ್ನು ಯಾಕೂಬ್ ನನ್ನು ಕೆಲವು ವರ್ಷಗಳ ಹಿಂದೆಯೇ ನಾಗ್ಪುರದಲ್ಲಿ ಗಲ್ಲಿಗೇರಿಸಲಾಗಿತ್ತು. ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಸುಫ್ ತಂದೆ ಅಬ್ದುಲ್ ರಜಾಕ್ ಮೆಮೊನ್, ತಾಯಿ ಹನೀಫಾ ಸೇರಿದಂತೆ ಒಂದೇ ಕುಟುಂಬದ 6 ಜನರನ್ನು 1994 ರಲ್ಲಿ ಸಿಬಿಐ ಬಂಧನಕ್ಕೊಳಪಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.