ನವದೆಹಲಿ: ಭಾರತ- ಚೀನಾ ಗಡಿಯಲ್ಲಿ ಉದ್ವಿಗ್ನತೆ ಮುಂದುವರೆದಂತೆ, ಚೀನಾದ ಸರಕುಗಳನ್ನು ಬಹಿಷ್ಕರಿಸುವ ಬೇಡಿಕೆಗಳು ಜೋರಾಗಿ ಕೇಳಿ ಬರುತ್ತಿವೆ. ಹೆಚ್ಚುತ್ತಿರುವ ಚೀನಾ ವಿರೋಧಿ ಭಾವನೆಗಳ ನಡುವೆ, ಚೀನಾದ ಮೊಬೈಲ್ ಫೋನ್ ತಯಾರಕ ಕ್ಸಿಯೋಮಿ ‘ಮೇಡ್ ಇನ್ ಇಂಡಿಯಾ’ ಬ್ಯಾನರ್ಗಳನ್ನು ತನ್ನ ಶಾಪ್ಗಳ ಮುಂದೆ ಹಾಕುತ್ತಿದೆ. ಈ ಮೂಲಕ ತನ್ನ ಬ್ರ್ಯಾಂಡ್ ಹೆಸರನ್ನು ಮರೆ ಮಾಡುತ್ತಿದೆ. ಜನರ ಆಕ್ರೋಶ ತನ್ನತ್ತ ತಿರುಗುವುದನ್ನು ತಡೆಯಲು ಈ ರೀತಿ ಮಾಡುತ್ತಿದೆ.
ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಶನ್ (AIMRA), ಚೀನಾದ ಮೊಬೈಲ್ ಬ್ರ್ಯಾಂಡ್ಗಳಿಗೆ ವಿಧ್ವಂಸಕತೆಯ ಬೆದರಿಕೆ ಬರಬಹುದು ಎಂಬ ಎಚ್ಚರಿಕೆಯನ್ನು ರವಾನಿಸಿದ ಹಿನ್ನೆಲೆಯಲ್ಲಿ ಅದು ಈ ನಿರ್ಧಾರ ಮಾಡಿದೆ.
“ನಾವು ನಮ್ಮ ಪತ್ರದಲ್ಲಿ, ಚಿಲ್ಲರೆ ವ್ಯಾಪಾರಿಗಳಿಗೆ ಈ ಸೈನೇಜ್ಗಳನ್ನು ಬಟ್ಟೆ / ಫ್ಲೆಕ್ಸ್ನಿಂದ ಮುಚ್ಚಿಡಲು ಅಥವಾ ಕೆಲವು ತಿಂಗಳುಗಳವರೆಗೆ ಅಂಗಡಿ ಮುಂಭಾಗದಿಂದ ಬೋರ್ಡ್ಗಳನ್ನು ತೆಗೆದುಹಾಕಲು ಅವಕಾಶ ನೀಡುವಂತೆ ನಾವು ಬ್ರಾಂಡ್ಗಳಿಗೆ ವಿನಂತಿಸಿದ್ದೇವೆ. ಕ್ಸಿಯೋಮಿ ‘ಮೇಡ್ ಇನ್ ಇಂಡಿಯಾ’ ಬ್ಯಾನರ್ಗಳನ್ನು ಹಾಕಲು ಪ್ರಾರಂಭಿಸಿದೆ”ಎಂದು AIMRA ರಾಷ್ಟ್ರೀಯ ಅಧ್ಯಕ್ಷ ಅರವಿಂದರ್ ಖುರಾನಾ ತಿಳಿಸಿದ್ದಾರೆ.
“ಆಕ್ರೋಶ ಹೆಚ್ಚಾದರೆ ಇದು ಚಿಲ್ಲರೆ ವ್ಯಾಪಾರಿಗಳ ಸುರಕ್ಷತೆಗೆ ಅಪಾಯಕಾರಿಯಾಗಬಹುದು. ಚೀನೀ ಬ್ರ್ಯಾಂಡಿಂಗ್ ಅನ್ನು ಪ್ರದರ್ಶಿಸುವ ಬೋರ್ಡ್ಗಳಿಗೆ ಹಾನಿ ಉಂಟಾದರೆ ಅದಕ್ಕೆ ಚಿಲ್ಲರೆ ವ್ಯಾಪಾರಿಗಳನ್ನು ಹೊಣೆಗಾರರನ್ನಾಗಿ ಮಾಡಬಾರದು” ಎಂದು ಖುರಾನಾ ಹೇಳಿದರು.
ಮಾರುಕಟ್ಟೆ ಪಾಲಿನ ಶೇಕಡಾ 27 ರಷ್ಟು ಪಾಲನ್ನು ಹೊಂದಿರುವ ಕ್ಸಿಯೋಮಿ ದೇಶದ ಮೊಬೈಲ್ ಫೋನ್ ಕಂಪನಿಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಭಾರತವು ಕ್ಸಿಯೋಮಿಯ ಅತಿದೊಡ್ಡ ಮಾರುಕಟ್ಟೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.