ನವದೆಹಲಿ: ಭಾರತದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಬೇಕೆಂಬ ಮಹದಾಸೆ ಹೊತ್ತು ಯಾತ್ರಿಕ ವೀಸಾ ಪಡೆದು ಪಾಕಿಸ್ಥಾನದಿಂದ ಆಗಮಿಸುವ ಹಿಂದೂ ಮತ್ತು ಸಿಖ್ಖ್ ಧರ್ಮಿಯರು ಇನ್ನು ಮುಂದೆ ಪೊಲೀಸರಿಗೆ ಮಾಹಿತಿ ನೀಡುವಂತಹ ಕಿರಿಕಿರಿಗಳನ್ನು ಅನುಭವಿಸಬೇಕಾಗಿಲ್ಲ.
ಪಾಕಿಸ್ಥಾನದಿಂದ ಬರುವ ಯಾತ್ರಿಕರ ಅನುಕೂಲಕ್ಕೆಂದು ಕೇಂದ್ರ ಪ್ರಯಾಣ ನಿಯಮಗಳನ್ನು ಸಡಿಲಗೊಳಿಸಿದೆ. ಅವರ ಪ್ರವೇಶ ಮತ್ತು ಉಳಿಯಲು ಅನುಕೂಲವಾಗುವಂತೆಯೂ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ.
ಪರಿಷ್ಕೃತ ಮಾರ್ಗಸೂಚಿಯಂತೆ, ಪಾಕಿಸ್ಥಾನದಿಂದ ಆಗಮಿಸುವ ಯಾತ್ರಿಕರ ತಲಾ ಒಂದು ಗುಂಪಲ್ಲಿ 50 ಮಂದಿ ಇರಬಹುದು ಮತ್ತು ಪ್ರತಿ ಗುಂಪಿಗೂ ಒಬ್ಬ ನಾಯಕನಿರಬೇಕು. ಎಲ್ಲಾ ಯಾತ್ರಿಕರು ಪೊಲೀಸರ ಬಳಿ ತಮ್ಮ ಬಗ್ಗೆ ವರದಿಗಳನ್ನು ನೀಡಬೇಕಾಗಿಲ್ಲ. ಗುಂಪಿನ ನಾಯಕನಿಗೆ ಮಾತ್ರ ವರದಿ ಸಲ್ಲಿಸುವ ಜವಾಬ್ದಾರಿ ನೀಡಲಾಗಿದೆ.
ಇದುವರೆಗೆ ಪ್ರತಿಯೊಬ್ಬ ಯಾತ್ರಿಕರೂ ತಮ್ಮ ವರದಿ ಒಪ್ಪಿಸಬೇಕಾಗಿತ್ತು, ಇದು ಪಾಕಿಸ್ಥಾನದ ಅಲ್ಪಸಂಖ್ಯಾತ ಯಾತ್ರಿಕರಿಗೆ ಅತಿ ಕಿರಿಕಿರಿ ಉಂಟು ಮಾಡುತ್ತಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.