ನವದೆಹಲಿ: ಲಡಾಕ್ ಗಡಿಯಲ್ಲಿ ಚೀನಾ ಭಾರತದ ವಿರುದ್ಧ ಕಾಲ್ಕೆರೆದು ತಂಟೆ ಮಾಡುತ್ತಿದ್ದರೆ, ಇತ್ತ ಭಾರತೀಯರೂ ಚೀನಾ ವಸ್ತುಗಳನ್ನು ಬಳಕೆ ಮಾಡುವುದನ್ನು ನಿಷೇಧಿಸುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೂ ಚೀನಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಏರಿಸುವತ್ತ ದಿಟ್ಟ ಹೆಜ್ಜೆ ಇರಿಸಿದೆ.
ಈ ನಡುವೆ ಚೀನಾದ ಸೌರಶಕ್ತಿ ಫಲಕಗಳಿಗೆ ಆಮದು ಸುಂಕವನ್ನು ಹೇರಲು ಕೇಂದ್ರ ಯೋಚಿಸುತ್ತಿದೆ. ಈ ಕುರಿತ ಪ್ರಸ್ತಾವನೆಯನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಇಂಧನ ಸಚಿವ ಆರ್ ಕೆ ಸಿಂಗ್ ಅವರು ಸಲ್ಲಿಸಿದ್ದಾರೆ. ಮುಂದಿನ ಒಂದು ವರ್ಷಗಳ ಅವಧಿಗೆ ಈ ಆಮದು ಶುಲ್ಕವನ್ನು 20-25 ಪಟ್ಟು ಹೆಚ್ಚಿಸುವಂತೆಯೂ ಈ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ನಂತರದ ವರ್ಷದಲ್ಲಿ 40% ಆಮದು ಸುಂಕ ಹೆಚ್ಚಳದ ಕುರಿತಂತೆಯೂ ಇದರಲ್ಲಿ ಸರ್ಕಾರಕ್ಕೆ ತಿಳಿಸಲಾಗಿದೆ. ಈ ಬಾರಿಯ ಸುಂಕದ ಅವಧಿ ಜುಲೈ ತಿಂಗಳಲ್ಲಿ ಅಂತ್ಯವಾಗಲಿದ್ದು, ಸದ್ಯ ಈ ಅವಧಿಯಲ್ಲಿ 15% ಸುಂಕವನ್ನು ವಿಧಿಸಲಾಗಿದೆ.
ಇನ್ನೊಂದೆಡೆ, ಮುಂಬೈನಲ್ಲಿ ಚೀನಾ ನಿರ್ಮಿತ ಮೊಬೈಲ್ ಮಾರಾಟ ಅಂಗಡಿಗಳ ನಾಮಫಲಕದ ಮೇಲೆ ಬಟ್ಟೆಗಳನ್ನು ಮುಚ್ಚುವ ಮೂಲಕ ವ್ಯಾಪಾರಸ್ಥರು ಚೀನಾ ವಿರೋಧಿ ನೀತಿಗೆ ಬೆಂಬಲ ಸೂಚಿಸಿದ್ದಾರೆ. ಚೀನಾಗೆ ಆರ್ಥಿಕ ಹೊಡೆತ ನೀಡುವ ಸಲುವಾಗಿ ದೇಶದ ಜನರೂ ಚೀನಾ ವಸ್ತುಗಳ ಬಳಕೆ ನಿಲ್ಲಿಸುವ ಸಲುವಾಗಿ ಯೋಚಿಸುತ್ತಿದ್ದು, ಪ್ರತಿಭಟನೆಗಳನ್ನೂ ನಡೆಸಲಾಗುತ್ತಿದೆ. ಈ ನಡುವೆ ಚೀನಾದಿಂಥ ಬಂದ ಸೌರಶಕ್ತಿಗೆ ಸಂಬಂಧಿಸಿದಂತೆ ವಸ್ತುಗಳಿಗೂ ಸುಂಕ ಹೆಚ್ಚಿಸುವ ಸಲುವಾಗಿ ಕೇಂದ್ರದಿಂದ ಚಿಂತನೆಗಳು ನಡೆದಿವೆ.
ಒಟ್ಟಿನಲ್ಲಿ ಭಾರತದ ನಳವಿರುದ್ಧ ಕುತಂತ್ರ ಮಾಡುತ್ತಿರುವ ಪಾಪಿ ಚೀನಾಕ್ಕೆ ಬುದ್ಧಿ ಕಲಿಸಲು ಬೇಕಾದ ಎಲ್ಲಾ ತಂತ್ರಗಳನ್ನೂ ಕೇಂದ್ರ ತೆಗೆದುಕೊಳ್ಳಲು ಮುಂದಾಗಿದ್ದು, ಆ ಮೂಲಕ ಕುತಂತ್ರಿ ಚೀನಾದ ಸದ್ದಡಗಿಸಲು ಕ್ರಮ ಕೈಗೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.