ನವದೆಹಲಿ: ಚಂದಾದಾರರಿಗೆ ತಮಗೆ ಇಷ್ಟವಾದ ಚಾನೆಲ್ಗಳನ್ನು ಆಯ್ಕೆ ಮಾಡಲು ಮತ್ತು ವೀಕ್ಷಣೆಗೆ ಸುಲಭವಾಗುವಂತೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಚಾನೆಲ್ ಸೆಲೆಕ್ಟರ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.
ಡಿಟಿಎಚ್, ಕೇಬಲ್ ಕನೆಕ್ಷನ್ ಹೊಂದಿರುವ ಗ್ರಾಹಕರು ತಮ್ಮ ಚಂದಾದಾರಿಕೆಯನ್ನು ಪರಿಶೀಲನೆ ಮಾಡಿಕೊಳ್ಳಲು ಮತ್ತು ಎಲ್ಲಾ ಚಾನೆಲ್ಗಳನ್ನು ವೀಕ್ಷಿಸಲು ಸಹಾಯ ಮಾಡಲಿದೆ ಎಂದು TRAI ಹೇಳಿದೆ. ತಮಗೆ ಬೇಕಾದ ಚಾನೆಲ್ಗಳನ್ನು ಉಳಿಸಿಕೊಳ್ಳುವ ಮತ್ತು ಅನಗತ್ಯ ಎನಿಸಿದ ವಾಹಿನಿಗಳನ್ನು ತೆಗೆದು ಹಾಕುವುದಕ್ಕೂ ಈ ಆ್ಯಪ್ ವೀಕ್ಷಕರಿಗೆ ಸಹಾಯ ಮಾಡಲಿದೆ. ಆ ಮೂಲಕ ಕಡಿಮೆ ಬೆಲೆಗೆ ತಮ್ಮ ನೆಚ್ಚಿನ ವಾಹಿನಿಗಳನ್ನು ವೀಕ್ಷಿಸುವ ಸೌಲಭ್ಯವನ್ನು ಈ ಆ್ಯಪ್ ಮೂಲಕ ಒದಗಿಸಿಕೊಡಲಾಗುತ್ತಿದೆ ಎಂಬುದನ್ನು ತಿಳಿಸಿದೆ. ಜೊತೆಗೆ ಎನ್ ಸಿ ಎಫ್ ಮೂಲಕವೇ ವಾಹಿನಿಗಳನ್ನು ತಮ್ಮ ಪ್ಲ್ಯಾನ್ ಅಲ್ಲಿ ಸೇರಿಸಿಕೊಳ್ಳುವುದೂ ಈ ಚಾನೆಲ್ ಸೆಲೆಕ್ಟರ್ ಆ್ಯಪ್ನಿಂದ ಸಾಧ್ಯವಾಗಲಿದೆ.
ಅಲ್ಲದೆ ಈಗಾಗಲೇ ಆಕ್ಟಿವೇಟ್ ಮಾಡಿಕೊಂಡಿರುವ ಪ್ಲ್ಯಾನ್ಗಳನ್ನು ಸುಲಭವಾಗಿ ಈ ಆಪ್ ಬಳಸಿಕೊಂಡೇ ಬದಲಾವಣೆ ಮಾಡಿಕೊಳ್ಳಲು ಚಂದಾದಾರರಿಗೆ ಅವಕಾಶ ನೀಡಲಾಗಿದೆ. ಈ ಆ್ಯಪ್, ಎಪಿಐ ಮೂಲಕ ಗ್ರಾಹಕರ ಡೇಟಾಗಳ ಕುರಿತಂತೆ ಆಯಾ ಡಿಒಪಿ ಫ್ಲ್ಯಾಟ್ಫಾರ್ಮ್ಗಳಿಂದ ತೆಗೆದುಕೊಳ್ಳುತ್ತದೆ. ಬಳಿಕ ಗ್ರಾಹಕರ ಡಿಟಿಎಚ್ಗೆ ನಮೂದಾಗಿರುವ ಮೊಬೈಲ್ಗೆ ಒಟಿಪಿ ಕಳುಹಿಸುವ ಮೂಲಕ ಎಲ್ಲಾ ರೀತಿಯ ಬದಲಾವಣೆಯನ್ನು ಮಾಡಲಿದೆ. ಮೊಬೈಲ್ ಬಳಕೆ ಮಾಡದ ಗ್ರಾಹಕರಿಗೆ ಟಿವಿ ಪರದೆಯ ಮೇಲೆಯೇ ನೀಡುವ ವ್ಯವಸ್ಥೆಯನ್ನೂ ಈ ಆ್ಯಪ್ ಒಳಗೊಂಡಿದೆ ಎಂದು TRAI ತಿಳಿಸಿದೆ.
ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್ಗಳೆರಡರಲ್ಲೂ ಲಭ್ಯವಿದೆ. ಇದನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಡಿಟಿಎಚ್, ಕೇಬಲ್ ಮೊದಲಾದ ಸಂಪರ್ಕ ಪಡೆದಿರುವ ಗ್ರಾಹಕರು ತಮ್ಮ ಕನೆಕ್ಷನ್ ಕುರಿತ ಮಾಹಿತಿ ತಿಳಿದುಕೊಳ್ಳುವುದು, ಚಂದಾದಾರಿಕೆ ಬದಲಾಯಿಸುವುದು, ಹೊಸ ಚಂದಾದಾರಿಕೆ ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ ಎಂಬ ಮಾಹಿತಿಯನ್ನು TRAI ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.