ಶ್ರೀನಗರ : ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ 7 ತಿಂಗಳ ಬಳಿಕ ಇದೀಗ ಅಲ್ಲಿನ ಸರ್ಕಾರ ಅಲ್ಲಿನ ನಿವಾಸಿಗಳಿಗೆ ನಿವೇಶನ ಪ್ರಮಾಣ ಪತ್ರಗಳನ್ನು ನೀಡಲಾರಂಭಿಸಿದೆ.
ಹೊಸ ನಿಯಮಾವಳಿಗಳ ಅಡಿಯಲ್ಲಿ ಶಾಶ್ವತ ವಸತಿ ಹೊಂದಿರುವ ಮತ್ತು ಹೊಂದಿರದೇ ಇರುವವರಿಗೂ ನಿವೇಶನ ಪ್ರಮಾಣ ಪತ್ರಗಳನ್ನು ನೀಡುವುದಕ್ಕೆ ಪ್ರಾರಂಭಿಸಿದೆ. ಕಳೆದ ಮೇ ತಿಂಗಳಿನಿಂದಲೇ ಕೇಂದ್ರ ಸರ್ಕಾರ ನಿವೇಶನ ಪ್ರಮಾಣ ಪತ್ರಗಳನ್ನು ನೀಡುವಂತೆ ಆದೇಶಿಸಿದ್ದು, ಅದರಂತೆ ತಹಶೀಲ್ದಾರರ ಕಛೇರಿಯಲ್ಲಿ ಪೂರಕ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ.
ಈ ಪ್ರಮಾಣ ಪತ್ರಕ್ಕಾಗಿ ಆನ್ಲೈನ್ ಅರ್ಜಿಯನ್ನೂ ಆರಂಭಿಸಲಾಗಿದ್ದು, ಲೆಪ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಅವರು ಅಧಿಕೃತ ಚಾಲನೆಯನ್ನು ನೀಡಿದ್ದರು. ಕೊರೋನಾ ಕಾರಣದಿಂದಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಸಲ್ಲಿಸಿತ್ತು. ಬಾರಾಮುಲ್ಲಾ ಪ್ರದೇಶದ ಸೊಪೋರ್ನ ಆಲಿಯಾ ತಾರಿಕ್ ಅವರು ಇ- ಮೋಡ್ ಮೂಲಕ ಅರ್ಜಿ ಸಲ್ಲಿಸಿ, ನಿವೇಶನ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವ ಮೊದಲ ವ್ಯಕ್ತಿಯಾಗಿದ್ದಾರೆ.
ಪಿಆರ್ಸಿ ಹೊಂದಿರುವವರು, ಇತರ ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಇ ಮೋಡ್ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗಿದೆ. ಅಲ್ಲದೆ ಆನ್ಲೈನ್ ಮೂಲಕವೇ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವುದಕ್ಕೂ ಅವಕಾಶ ಕಲ್ಪಿಸಿದೆ. ಪಿಆರ್ಸಿ ಸೌಲಭ್ಯ ಹೊಂದಿದವರು ಕಛೇರಿಯ ಮುಂದೆ ಕಾಯದೆಯೇ ಅರ್ಜಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 15 ವರ್ಷಗಳಿಗೂ ಅಧಿಕ ವರ್ಷಗಳಿಂದ ಶಾಶ್ವತ ವಸತಿ ಹೊಂದಿರುವವರು ಮತ್ತು ಹೊಂದಿರದ ಜನರಿಗೂ ನಿವೇಶನ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಆ ಮೂಲಕ ಕಣಿವೆ ರಾಜ್ಯದ ನಿವಾಸಿಗಳಿಗೆ ಜೀವನ ಭದ್ರತೆ ಒದಗಿಸುವಲ್ಲಿ ಕೇಂದ್ರ ಮಹತ್ವದ ಕ್ರಮಕ್ಕೆ ನಾಂದಿ ಹಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.