ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ರಷ್ಯಾದಲ್ಲಿ ನಡೆದ ವಿಕ್ಟರಿ ಡೇ ಪೆರೇಡ್ನಲ್ಲಿ ಪಾಲ್ಗೊಂಡರು ಮತ್ತು ಪೆರೇಡ್ನಲ್ಲಿ ಭಾಗವಹಿಸಿದ್ದ ಭಾರತೀಯ ಸಶಸ್ತ್ರ ಪಡೆಗಳ ತ್ರಿ-ಸೇವಾ ದಳ ಬಗ್ಗೆ ಹೆಮ್ಮೆ ಮತ್ತು ಸಂತೋಷ ವ್ಯಕ್ತಪಡಿಸಿದರು. ಮಾಸ್ಕೋದ ರೆಡ್ ಸ್ಕ್ವೇರ್ನಲ್ಲಿ ನಡೆದ ಪೆರೇಡ್ನ 75ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ರಷ್ಯಾದ ರಕ್ಷಣಾ ಸಚಿವಾಲಯದ ಆಹ್ವಾನದ ಮೇರೆಗೆ ಅವರು ಜೂನ್ 23 ರಂದು ಮೂರು ದಿನಗಳ ಭೇಟಿಗಾಗಿ ಮಾಸ್ಕೋಗೆ ತೆರಳಿದರು.
1941-1945ರ ಮಹಾ ದೇಶಭಕ್ತಿಯ ಯುದ್ಧದಲ್ಲಿ ಸೋವಿಯತ್ ಜನರ ವಿಜಯದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಇಂದು ಮಾಸ್ಕೋದ ರೆಡ್ ಸ್ಕ್ವೇರ್ನಲ್ಲಿ ನಡೆದ ವಿಜಯ ದಿನದ ಮೆರವಣಿಗೆಯಲ್ಲಿ ರಾಜನಾಥ್ ಅವರು ಅತಿಥಿಯಾಗಿ ಭಾಗಿಯಾದರು ಮತ್ತು ಈ ಮೆರವಣಿಗೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೇವಾ ದಳವೂ ಭಾಗವಹಿಸಿದೆ.
“ಮಾಸ್ಕೋದಲ್ಲಿ ನಡೆದ ವಿಕ್ಟರಿ ಡೇ ಪೆರೇಡ್ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ತ್ರಿ-ಸೇವಾ ತುಕಡಿಯ ಪ್ರಭಾವಶಾಲಿ ಪಥಸಂಚಲನ ನಿಜಕ್ಕೂ ನನಗೆ ಅತ್ಯಂತ ಹೆಮ್ಮೆ ಮತ್ತು ಸಂತೋಷದ ಕ್ಷಣವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ತ್ರಿ-ಸೇವಾದ 75 ಸದಸ್ಯರ ಭಾರತೀಯ ಮಿಲಿಟರಿ ತಂಡವು ಪಥಸಂಚಲನದಲ್ಲಿ ಭಾಗವಹಿಸಿದೆ. ಚೀನಾ ಸೇರಿದಂತೆ ಕನಿಷ್ಠ 11 ದೇಶಗಳ ಸಶಸ್ತ್ರ ಪಡೆಗಳ ಸಿಬ್ಬಂದಿಯೊಂದಿಗೆ ಭಾರತೀಯ ತಂಡ ಭಾಗವಹಿಸಿದೆ.
ಜೂನ್ 23 ರಂದು ರಾಜನಾಥ್ ಅವರು ರಷ್ಯಾದ ಉಪ ಪ್ರಧಾನ ಮಂತ್ರಿ ಯೂರಿ ಬೊರಿಸೊವ್ ಅವರನ್ನು ಭೇಟಿ ಮಾಡಿದರು ಮತ್ತು ಉಭಯ ನಾಯಕರು ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ವಿಷಯಗಳ ಕುರಿತು ಚರ್ಚೆ ನಡೆಸಿದರು ಮತ್ತು ಭಾರತ-ರಷ್ಯಾ ರಕ್ಷಣಾ ಸಹಕಾರವನ್ನು ಪರಿಶೀಲಿಸಿದರು.
75ನೇ ವಿಕ್ಟರಿ ಡೇ ಸಮಾರಂಭಗಳಿಗೆ ಸಿಂಗ್ ತಮ್ಮ ಶುಭಾಶಯಗಳನ್ನು ತಿಳಿಸಿದರು. ಅಲ್ಲದೇ, ಭಾರತ ಮತ್ತು ರಷ್ಯಾದ ಸಾಮಾನ್ಯ ಭದ್ರತೆಗೆ ಸಹಕರಿಸಿದ ರಷ್ಯಾದ “ಸ್ನೇಹಪರ” ಜನರಿಗೆ, ವಿಶೇಷವಾಗಿ ಪರಿಣತರಿಗೆ ಅಭಿನಂದಿಸಿದರು ಎಂದು ಅಧಿಕೃತ ಹೇಳಿಕೆ ಮಂಗಳವಾರ ತಿಳಿಸಿದೆ.
Impressive turnout of the Tri-Service contingent of the Indian Armed Forces at the Victory Day Parade in Moscow is indeed an extremely proud and happy moment for me. pic.twitter.com/csEKNGKFLU
— Rajnath Singh (@rajnathsingh) June 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.