ನವದೆಹಲಿ : ಮಿಜೋರಾಂನ ಶಾಸಕ ಝಡ್. ಆರ್ ಥಿಯಾಮ್ಸಂಗಾ ಅವರು ಒಬ್ಬ ಅರ್ಹ ವೈದ್ಯ. 2018ರಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ ಅವರು ತಮ್ಮ ವೈದ್ಯಕೀಯ ವೃತ್ತಿಯನ್ನು ತೊರೆದಿದ್ದರು. ಆದರೆ ತುರ್ತು ಸಂದರ್ಭ ಬಂದಾಗ ಅವರಿಂದೂ ತನ್ನ ವೈದ್ಯಕೀಯ ಕಿಟ್ ಹಿಡಿದು ಸೇವೆ ಸಲ್ಲಿಸಲು ಸಿದ್ಧರಾಗುತ್ತಾರೆ.
ಕಳೆದ ವಾರ ಅವರು ಭಾರತೀಯ ರಿಸರ್ವ್ ಬೆಟಾಲಿಯನ್ನ ಅನಾರೋಗ್ಯ ಪೀಡಿತ ಭದ್ರತಾ ಸಿಬ್ಬಂದಿಯೊಬ್ಬರಿಗೆ ಸಹಾಯ ಮಾಡುವ ಸಲುವಾಗಿ ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ದೂರದ ಟಿಯಾವ್ ಹೊಳೆಯನ್ನು ದಾಟಿ ಕಾಲ್ನಡಿಗೆ ಮೂಲಕ ಹಲವು ಕಿಲೋಮೀಟರ್ ನಡೆದಿದ್ದಾರೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸೈನಿಕನಿಗೆ ಸಹಾಯ ಮಾಡಲು ತನ್ನ ಮಗಳು ಹಾಗೂ ವೈದ್ಯೆಯೂ ಆಗಿರುವ ಡಾಂಗ್ಜುವಾಲಿ ಅವರೊಂದಿಗೆ ತೆರಳಿ ಸೈನಿಕನಿಗೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಪಡೆದ ಯೋಧ ಕರೋನವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಗಡಿಯಾಚೆಗಿನ ಚಲನೆಯನ್ನು ತಡೆಯಲು ನಿಯೋಜಿಸಲಾದ ತಂಡದ ಭಾಗವೂ ಆಗಿದ್ದಾರೆ.
“ಭದ್ರತಾ ಸಿಬ್ಬಂದಿಗೆ ತೀವ್ರ ಹೊಟ್ಟೆ ನೋವು ಇದೆ ಮತ್ತು ತಕ್ಷಣದ ಚಿಕಿತ್ಸೆಯ ಅಗತ್ಯವಿದೆ ಎಂದು ನಮಗೆ ತಿಳಿಸಲಾಯಿತು. ನಾವು ಡ್ಯೂಟಿ ಪೋಸ್ಟ್ಗೆ ಧಾವಿಸಿದೆವು ಆದರೆ ನಮ್ಮ ವಾಹನವು ಹೊಳೆಯನ್ನು ದಾಟಲು ಸಾಧ್ಯವಾಗದ ಕಾರಣ ನಾವು ಹಲವಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಹೋಗಬೇಕಾಯಿತು. ನಾವು ರೋಗಿಯನ್ನು ಪರೀಕ್ಷಿಸಿದ್ದೇವೆ ಮತ್ತು ಚಿಕಿತ್ಸೆ ನೀಡಿದ್ದೇವೆ. ಅದೃಷ್ಟವಶಾತ್ ಅವರಿಗೆ ಹೊಟ್ಟೆಯಲ್ಲಿ ಯಾವುದೇ ತೊಂದರೆಯಿಲ್ಲ”ಎಂದು ಥಿಯಾಮ್ಸಂಗಾ ಹೇಳಿದ್ದಾರೆ.
ರಾಜ್ಯ ಸರ್ಕಾರದ ಕೋವಿಡ್ -19 ವೈದ್ಯಕೀಯ ಕಾರ್ಯಾಚರಣಾ ತಂಡದ ಅಧ್ಯಕ್ಷರೂ ಆಗಿರುವ, ಚಂಪೈ ನಾರ್ತ್ನ 62 ವರ್ಷದ ಶಾಸಕ ಏಪ್ರಿಲ್ನಲ್ಲಿ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಲು ಲಾಂಗ್ಟ್ಲೈ ಜಿಲ್ಲೆಯ ದೂರದ ಸಂಗೌ ಗ್ರಾಮಕ್ಕೆ ಧಾವಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.