ನವದೆಹಲಿ: ಗೂಗಲ್ನಲ್ಲಿ ಜನರು ಹುಡುಕಾಟ ನಡೆಸುವ ವಿಷಯಗಳು, ಚಿತ್ರಗಳು ಸೇರಿದಂತೆ ಎಲ್ಲಾ ವಿಚಾರಗಳಿಗೂ ಸಂಬಂಧಿಸಿದಂತೆ ಸತ್ಯಾಂಶ ಪರಿಶೀಲನೆ ನಡೆಸಲು ಗೂಗಲ್ ಸಂಸ್ಥೆ ಫ್ಯಾಕ್ಟ್ ಚೆಕ್ ಲೇಬಲ್ಗಳನ್ನು ಪರಿಚಯಿಸಿದೆ.
ಜಾಗತಿಕವಾಗಿ, ಜನರಿಗೆ ಅವರಿಗೆ ಬೇಕಾಗಿರುವ ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಹಾಯವಾಗುವಂತೆ ಗೂಗಲ್ ಈ ಫ್ಯಾಕ್ಟ್ ಚೆಕ್ ಲೇಬಲ್ ಅನ್ನು ಬಳಸಲು ನಿರ್ಧರಿಸಿದೆ ಎಂದು ಸರ್ಚ್ ಗ್ರೂಪ್ ವ್ಯವಸ್ಥಾಪಕ ಹ್ಯಾರಿಸ್ ಕೊಹೆನ್ ಮಾಹಿತಿ ನೀಡಿದ್ದಾರೆ.
ಜನರು ಹುಡುಕಾಟ ನಡೆಸಿ ಮಾಹಿತಿ ತಿಳಿದುಕೊಳ್ಳುವ ಸಂದರ್ಭ, ಆ ಚಿತ್ರಗಳ ಕೆಳಗೆ ಫ್ಯಾಕ್ಟ್ ಚೆಕ್ ಲೇಬಲ್ಗಳನ್ನು ಅಳವಡಿಸಲಾಗುತ್ತಿದ್ದು, ಅದನ್ನು ಕ್ಲಿಕ್ ಮಾಡಿದಾಗ ಆ ವಿಚಾರದ ಸತ್ಯಾಸತ್ಯತೆಯ ಬಗ್ಗೆ ಪೂರಕ ಮಾಹಿತಿಗಳನ್ನು ಗೂಗಲ್ ನೀಡುತ್ತದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಸತ್ಯಾಂಶಗಳ ಮಾಹಿತಿಗಳನ್ನು ಒಳಗೊಂಡ ಅಧಿಕೃತ ಮೂಲಗಳನ್ನೇ ಬಳಕೆ ಮಾಡಿಕೊಂಡು ವಸ್ತುಸ್ಥಿತಿಯ ಬಗ್ಗೆ ಮಾಹಿತಿ ನೀಡುವುದಾಗಿ ಗೂಗಲ್ ಮಾಹಿತಿ ನೀಡಿದೆ. ಬ್ರೆಜಿಲ್, ಭಾರತ ಮತ್ತು ಯುಎಸ್ ನಲ್ಲಿ ಫ್ಯಾಕ್ಟ್ ಚೆಕ್ ಲೇಬಲ್ ಗಳು ಕ್ಲೈಮ್ ರಿವ್ಯೂ ಅನ್ನು ಅವಲಂಬಿಸಿದ್ದು, ಯೂಟ್ಯೂಬ್ ಸಹ ಈ ಲೇಬಲ್ ಗಳಿಗೆ ಕ್ಲೈಂ ರಿವ್ಯೂ ಗಳನ್ನು ಅವಲಂಬಿಸಿ ಕಾರ್ಯ ನಿರ್ವಹಿಸುವುದಾಗಿಯೂ ಗೂಗಲ್ ಮಾಹಿತಿ ನೀಡಿದೆ.
ಬಳಕೆದಾರರಿಗೆ ಉಪಯುಕ್ತ ಮಾಹಿತಿಗಳನ್ನು, ಸತ್ಯಾಸತ್ಯೆಗಳ ಆಧಾರದಲ್ಲಿ ನೀಡುವ ಸದುದ್ದೇಶದಿಂದ ಫ್ಯಾಕ್ಟ್ ಚೆಕ್ ಲೇಬಲ್ ಬಳಕೆ ಮಾಡಲಾಗುತ್ತಿದೆ ಎಂದು ಗೂಗಲ್ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.