ನವದೆಹಲಿ: ಲಡಾಖ್ನಲ್ಲಿ ಭಾರತ-ಚೀನಾ ವಿವಾದದ ಈ ಸಂದರ್ಭದಲ್ಲಿ ಶೇಕಡಾ 73.6 ರಷ್ಟು ಭಾರತದ ಜನರು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಪ್ರತಿಪಕ್ಷಗಳಿಗಿಂತ ಹೆಚ್ಚಾಗಿ ಭಾರತ ಸರ್ಕಾರವನ್ನು ನಂಬುತ್ತಿದ್ದಾರೆ ಎಂಬುದು ಇತ್ತೀಚಿನ ಐಎಎನ್ಎಸ್ ಸಿವೊಟರ್ ಸ್ನ್ಯಾಪ್ ಪೋಲ್ ಮೂಲಕ ತಿಳಿದು ಬಂದಿದೆ.
ಸಮೀಕ್ಷೆಯ ಪ್ರಕಾರ, ವಿವಿಧ ವಯೋಮಾನದ ಜನರು ವಿರೋಧ ಪಕ್ಷಗಳ ಬದಲು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಭಾರತ ಸರ್ಕಾರದ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
60 ವರ್ಷಕ್ಕಿಂತ ಮೇಲ್ಪಟ್ಟ 83.7 ಪ್ರತಿಶತದಷ್ಟು ಜನರು ರಾಷ್ಟ್ರೀಯ ಭದ್ರತಾ ವಿಷಯಗಳ ಬಗ್ಗೆ ಸರ್ಕಾರವನ್ನು ಹೆಚ್ಚು ನಂಬುತ್ತೇವೆ ಎಂದು ಹೇಳಿದ್ದಾರೆ, ನಂತರ ಮಧ್ಯಮ ವಯಸ್ಸು ಅಂದರೆ 45-60 ವಯಸ್ಸಿನ ಶೇಕಡಾ 76.5 ಜನರು, 25-45 ವಯಸ್ಸಿನ 72.1 ರಷ್ಟು ಜನರು ಸರ್ಕಾರ ಮೇಲೆ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಶೇಕಡಾ 68.8ರಷ್ಟು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಕೂಡ ಮೋದಿ ಸರ್ಕಾರ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ.
ಶಿಕ್ಷತ ವರ್ಗದಿಂದಲೂ ಸರ್ಕಾರಕ್ಕೆ ಗರಿಷ್ಠ ಬೆಂಬಲ ವ್ಯಕ್ತವಾಗಿದೆ. ಕೆಳ ಶಿಕ್ಷಣ ಗುಂಪಿನ ಶೇಕಡಾ 75.5ರಷ್ಟು, ಮಧ್ಯಮ ಶಿಕ್ಷಣ ಗುಂಪಿನ 74.2 ಮತ್ತು ಉನ್ನತ ಶಿಕ್ಷಣ ಗುಂಪಿನ 64.4 ಶೇಕಡಾ ಮಂದಿ ಮೋದಿ ಸರ್ಕಾರದ ಮೇಲೆ ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ನಂಬಿಕೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಗುಂಪು ವಿಭಾಗದಲ್ಲಿ, ಮುಸ್ಲಿಮರು ಮತ್ತು ಸಿಖ್ಖರನ್ನು (ಕ್ರಮವಾಗಿ 27.4 ಮತ್ತು 49.7 ಶೇಕಡಾ)ಹೊರತುಪಡಿಸಿ, ಹೆಚ್ಚಿನ ಜನರು ರಾಷ್ಟ್ರೀಯ ಭದ್ರತಾ ವಿಷಯಗಳ ಬಗ್ಗೆ ಪ್ರತಿಪಕ್ಷ ಪಕ್ಷಗಳಿಗಿಂತ ಹೆಚ್ಚು ಭಾರತ ಸರ್ಕಾರವನ್ನು ನಂಬಿದ್ದಾರೆ.
ಆದಾಯ ಗುಂಪು ವಿಭಾಗದಲ್ಲಿ, ಕಡಿಮೆ ಆದಾಯದ ಗುಂಪಿನಲ್ಲಿರುವ ಶೇಕಡಾ 75.4 ಜನರು ವಿರೋಧ ಪಕ್ಷಗಳ ಬದಲು ಭಾರತ ಸರ್ಕಾರವನ್ನು ನಂಬುತ್ತಾರೆ, ನಂತರದ ಸ್ಥಾನದಲ್ಲಿ ಮಧ್ಯಮ ಆದಾಯದ ಗುಂಪಿನಲ್ಲಿ 72.6 ಮತ್ತು ಹೆಚ್ಚಿನ ಆದಾಯದ ಗುಂಪಿನಲ್ಲಿ 70 ಪ್ರತಿಶತದಷ್ಟು ಜನರು ಮೋದಿ ಸರ್ಕಾರವನ್ನು ನಂಬುತ್ತಾರೆ.
ಲಿಂಗ ವಿಭಾಗದಲ್ಲಿ, ಪುರುಷ (76.3 ಶೇಕಡಾ) ಮತ್ತು ಸ್ತ್ರೀ (70.6 ಶೇಕಡಾ) ಇಬ್ಬರೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ, ವಿಶೇಷವಾಗಿ ಚೀನಾದೊಂದಿಗೆ ನಡೆಯುತ್ತಿರುವ ವಿವಾದದ ಬಗ್ಗೆ ಭಾರತ ಸರ್ಕಾರದ ನಿಲುವುಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.