ಚೆನ್ನೈ: ತಮಿಳುನಾಡಿನ ಅತ್ಯಂತ ಸುಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾದ ರಾಮೇಶ್ವರದಲ್ಲಿ ಅದ್ಭುತವೊಂದು ನಡೆದಿದೆ. ಇಲ್ಲಿನ ಪೂರ್ವ ತೀರದಲ್ಲಿ ಶಿವಲಿಂಗವೊಂದು ಪತ್ತೆಯಾಗಿದೆ. ರಾಮೇಶ್ವರಂ ದೇಗುಲದ ಸಮೀಪವೇ ಸಮುದ್ರ ದಡದಲ್ಲಿ ಶಿವಲಿಂದ ಪತ್ತೆಯಾಗಿದ್ದು, ಸ್ಥಳೀಯರು ಇದಕ್ಕೆ ಪೂಜೆ ಕೈಂಕರ್ಯಗಳನ್ನು ಸಲ್ಲಿಸುತ್ತಿದ್ದಾರೆ.
ದೇಶದ ಪುಣ್ಯಕ್ಷೇತ್ರಗಳಲ್ಲಿ ರಾಮೇಶ್ವರಂ ಕೂಡ ಒಂದಾಗಿದೆ. ಈಗ ಅಲ್ಲಿನ ಸಮುದ್ರ ತೀರದಲ್ಲಿ ಶಿವಲಿಂಗ ಪತ್ತೆಯಾಗಿರುವುದು ಭಕ್ತರನ್ನು ಭಕ್ತಿಪರವಶರಾಗುವಂತೆ ಮಾಡಿದೆ. ಈ ಪ್ರದೇಶದಲ್ಲಿ ಅನೇಕ ದೇವಾಲಯಗಳಿದ್ದು, ವಿಶ್ವದ ಅತಿ ಉದ್ದ ಕಾರಿಡಾರ್ ಅನ್ನು ರಾಮೇಶ್ವರಂ ದೇವಾಲಯ ಹೊಂದಿದೆ. ಈ ದೇವಾಲಯ 1,212 ಕಂಬಗಳನ್ನು ಹೊಂದಿದೆ.
ಕಳೆದ ದಿನಗಳ ಹಿಂದೆಯಷ್ಟೇ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸುಮಾರು 200 ವರ್ಷ ಹಳೆಯ ಶಿವ ದೇವಾಲಯ ಪತ್ತೆಯಾಗಿತ್ತು, ಇಲ್ಲಿನ ಮರಳಿನ ಅಡಿಯಲ್ಲಿ ಹೂತು ಹೋದ ದೇಗುಲವನ್ನು ಜನರು ಪತ್ತೆ ಮಾಡಿದ್ದರು. ಆ ದೇಗುಲವನ್ನು ಪುನರುಜ್ಜೀವನಗೊಳಿಸಲು ಸ್ಥಳಿಯರು ಮುಂದಾಗಿದ್ದಾರೆ.
ಅದಾದ ಬಳಿಕ ಇದೀಗ ರಾಮೇಶ್ವರದಲ್ಲೂ ಶಿವಲಿಂಗ ಪತ್ತೆಯಾಗಿರುವುದು ಭಕ್ತರನ್ನು ಪುಳಕಿತಗೊಳಿಸಿದೆ.
A Shiva Linga was found amid coral rocks in Tamil Nadu’s Rameswaram. It was found at the eastern shore of Ramanathaswamy Temple. Watch full report for more pic.twitter.com/hbPooHJa8G
— Hindustan Times (@htTweets) June 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.