ನವದೆಹಲಿ: ʼಮೇಕ್ ಇನ್ ಇಂಡಿಯಾʼಗೆ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿ ಇರುವ ವಿಶೇಷ ಉದ್ದೇಶ ವಾಹಕವಾದ ಗವರ್ಮೆಂಟ್ ಇ-ಮಾರ್ಕೆಟ್ಪ್ಲೇಸ್(GeM)ನಲ್ಲಿ ನೋಂದಾಯಿತಗೊಳ್ಳುವ ಎಲ್ಲಾ ಹೊಸ ಉತ್ಪನ್ನಗಳ ಮೂಲ ದೇಶವನ್ನು ಮಾರಾಟಗಾರರು ಉಲ್ಲೇಖ ಮಾಡುವುದು ಕಡ್ಡಾಯವಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವಿಟ್ ಮೂಲಕ ಇದರ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
ಒಂದು ವೇಳೆ GeMನಲ್ಲಿ ಉತ್ಪನ್ನದ ಮೂಲ ದೇಶ ಯಾವುದು ಎಂಬುದನ್ನು ಉಲ್ಲೇಖ ಮಾಡದಿದ್ದರೆ ಆ ಉತ್ಪನ್ನವನ್ನು ಪೋರ್ಟಲ್ನಿಂದ ತೆಗೆದು ಹಾಕಲಾಗುವುದು ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದೆ.
ʼಮೇಕ್ ಇನ್ ಇಂಡಿಯಾʼ ಮತ್ತು ಆತ್ಮನಿರ್ಭರ ಭಾರತವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ.
ಉತ್ಪನ್ನಗಳಲ್ಲಿ ಇರುವ ಸ್ಥಳೀಯ ಅಂಶಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸುವ ಅವಕಾಶವನ್ನು GeM ಸಕ್ರಿಯಗೊಳಿಸಿದೆ. ಉತ್ಪನ್ನದಲ್ಲಿ ಸ್ಥಳಿಯ ವಸ್ತುಗಳ ಬಳಕೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಸರ್ಕಾರದ ನಿರ್ಧಾರದ ಪರಿಣಾಮವಾಗಿ ಉತ್ಪನ್ನದ ಮೂಲ ದೇಶ ಮತ್ತು ಅದರಲ್ಲಿರುವ ಸ್ಥಳೀಯ ಅಂಶಗಳ ಶೇಕಡಾವಾರುಗಳು ಎಲ್ಲಾ ವಸ್ತುಗಳ ಮಾರುಕಟ್ಟೆಗಳಲ್ಲಿ ಗೋಚರಿಸುತ್ತದೆ. ಅರ್ಹ ಉತ್ಪನ್ನಗಳಿಗಾಗಿ ಮೇಡ್-ಇನ್-ಇಂಡಿಯಾ ಲೋಗೋವನ್ನು ಸೇರಿಸಲು ಸಹ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗಾಲ್ವಾನ್ ಕಣಿವೆಯಲ್ಲಿ ಅಪ್ರಚೋದಿತ ದಾಳಿಯ ನಂತರ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಲು ಬೇಡಿಕೆಗಳು ಹೆಚ್ಚಾಗುತ್ತಿದೆ.
Information about Country of Origin by the sellers made mandatory on GeM. #MakeInIndia #AtmaNirbharBharat. https://t.co/pCNnRcnvQD
— Nirmala Sitharaman (@nsitharaman) June 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.