ನವದೆಹಲಿ: ವಿಶ್ವದಾದ್ಯಂತ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ, ದೈನಂದಿನ ಹೊಸ ಕೋವಿಡ್-19 ಪ್ರಕರಣಗಳ ದಾಖಲೆಯ ಮಟ್ಟವು ಸಾಂಕ್ರಾಮಿಕ ರೋಗವು ಒಂದೇ ಸಮಯದಲ್ಲಿ ಹಲವಾರು ದೊಡ್ಡ ದೇಶಗಳಲ್ಲಿ ಉತ್ತುಂಗಕ್ಕೇರಿದೆ ಮತ್ತು ವೈರಸ್ನ ಜಾಗತಿಕ ಚಟುವಟಿಕೆಯ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ.
ನಿನ್ನೆ ಜಿನೀವಾದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಸ್ಥಿತಿ ಮುಖ್ಯಸ್ಥ ಡಾ. ಮೈಕೆಲ್ ರಯಾನ್ ಅವರು, ಒಂದೇ ಸಮಯದಲ್ಲಿ ಹೆಚ್ಚು ಜನಸಂಖ್ಯೆಯ ಹಲವಾರು ದೇಶಗಳಲ್ಲಿ ಸಾಂಕ್ರಾಮಿಕ ರೋಗವು ಬೆಳೆಯುತ್ತಿರುವುದರಿಂದ ಸಂಖ್ಯೆಗಳು ಹೆಚ್ಚುತ್ತಿವೆ ಎಂದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹಲವಾರು ದೇಶಗಳು ಆಸ್ಪತ್ರೆಯ ದಾಖಲಾತಿ ಮತ್ತು ಸಾವುಗಳಲ್ಲಿ ಗಮನಾರ್ಹ ಹೆಚ್ಚಳವನ್ನು ಕಾಣುತ್ತಿವೆ ಎಂದು ಡಾ.ರಿಯಾನ್ ಉಲ್ಲೇಖಿಸಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳನ್ನು ಹೆಚ್ಚುತ್ತಿರುವ ಟೆಸ್ಟಿಂಗ್ ಸಾಮರ್ಥ್ಯದ ಮೂಲಕ ವಿವರಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ವೈರಸ್ ಈಗ ದೃಢವಾಗಿ ಸ್ಥಾಪಿತವಾಗಿದೆ ಎಂಬುದಾಗಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.