ನವದೆಹಲಿ: ಸೋಮವಾರ ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಭಗವಾನ್ ಜಗನ್ನಾಥ ರಥಯಾತ್ರೆಯನ್ನು ಜೂನ್ 23ರಂದು ಒರಿಸ್ಸಾದ ಪುರಿಯಲ್ಲಿ ನಡೆಯಲು ಅನುಮತಿ ನೀಡಿತು.
ಆದರೆ ಸುಪ್ರೀಂಕೋರ್ಟ್ ಈ ನಿಟ್ಟಿನಲ್ಲಿ ಕೆಲವು ಷರತ್ತುಗಳನ್ನು ವಿಧಿಸಿದೆ. ರಥಯಾತ್ರೆ ನಡೆಸಲು ಕೇಂದ್ರ, ರಾಜ್ಯ ಸರ್ಕಾರ ಮತ್ತು ದೇವಾಲಯ ಸಮಿತಿಯು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅದು ಸೂಚಿಸಿದೆ ಎಂದು ವರದಿಗಳು ತಿಳಿಸಿವೆ.
ಇದಲ್ಲದೆ, ಕೋವಿಡ್ -19 ಹೆಚ್ಚಳದ ಹಿನ್ನಲೆಯಲ್ಲಿ ಜನರ ಆರೋಗ್ಯದ ಬಗ್ಗೆ ಯಾವುದೇ ರಾಜಿ ಆಗಬಾರದು ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ. ಯಾತ್ರೆಯು ನಿಯಂತ್ರಣವನ್ನು ಕಳೆದುಕೊಳ್ಳುತ್ತಿದೆ ಎಂಬುದು ಅನುಭವಕ್ಕೆ ಬಂದರೆ ತಕ್ಷಣವೇ ಯಾತ್ರೆಯನ್ನು ನಿಲ್ಲಿಸಬೇಕು ಇದು ಒರಿಸ್ಸಾ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಅಧಿಕಾರ ನೀಡಿದೆ.
ಇದಕ್ಕೂ ಮುನ್ನ ಜೂನ್ 18 ರಂದು, ಯಾತ್ರೆಗೆ ಹೆಚ್ಚಿನ ಜನರು ಸೇರುತ್ತಾರೆ ಎಂಬುದನ್ನು ಉಲ್ಲೇಖಿಸಿ ಯಾತ್ರೆಗೆ ತಡೆ ನೀಡಿತ್ತು.
ವಿಶ್ವವಿಖ್ಯಾತ ಪುರಿ ಜಗನ್ನಾ ರಥಯಾತ್ರೆಯು ಪ್ರತಿವರ್ಷ ವಿಶ್ವದಾದ್ಯಂತದ ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಲಕ್ಷಾಂತರ ಜನರು ರಥಯಾತ್ರೆಯಲ್ಲಿ ಭಾಗಿಯಾಗಿ ಪುನೀತರಾಗುತ್ತಾರೆ. ಆದರೆ ಈ ಬಾರಿ ಕೊರೋನಾವೈರಸ್ ಮಹಾಮಾರಿ ವಕ್ಕರಿಸಿರುವುದರಿಂದ ಜನರನ್ನು ಸೇರಿಸದೆ ಯಾತ್ರೆ ನಡೆಸಬೇಕಾದ ಅನಿವಾರ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.