ನವದೆಹಲಿ: 16 ರಾಜ್ಯಗಳಲ್ಲಿ ಸಣ್ಣ ಅರಣ್ಯ ಉತ್ಪನ್ನ (ಎಂಎಫ್ಪಿ) ಯೋಜನೆಗೆ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ ನಡೆಯುತ್ತಿರುವ ಸಣ್ಣ ಅರಣ್ಯ ಉತ್ಪಾದನೆಗಳ ಖರೀದಿಯು 79.42 ಕೋಟಿ ರೂಪಾಯಿಗಳನ್ನು ಮುಟ್ಟುವ ಮೂಲಕ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದರೊಂದಿಗೆ, ವರ್ಷದ ಒಟ್ಟು ಖರೀದಿ ಸರ್ಕಾರಿ ಮತ್ತು ಖಾಸಗಿ ವ್ಯಾಪಾರ ಸೇರಿದಂತೆ 2000 ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ವರದಿಗಳು ತಿಳಿಸಿವೆ.
ಕೋವಿಡ್ -19 ಸಾಂಕ್ರಾಮಿಕ ಕಾಲದಲ್ಲಿ ಇದು ಅತೀ ಅಗತ್ಯವಾದ ನಿರ್ಧಾರ ಎಂಬುದು ಸಾಬೀತಾಗಿದೆ. ಬುಡಕಟ್ಟು ಜನಾಂಗದವರ ಜೀವನ ಮತ್ತು ಜೀವನೋಪಾಯಕ್ಕೆ ಕೋವಿಡ್ ದೊಡ್ಡ ಹೊಡೆತ ನೀಡಿತ್ತು. ಆದರೆ ಸಣ್ಣ ಅರಣ್ಯ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ನೀಡಿ ದೊಡ್ಡ ಮಟ್ಟದಲ್ಲಿ ಖರೀದಿ ಮಾಡಿದ್ದು ಅವರಿಗೆ ದೊಡ್ಡ ಮಟ್ಟದ ನಿರಾಳತೆಯನ್ನು ತಂದುಕೊಟ್ಟಿದೆ.
ಮೇ 26 ರಂದು ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ 23 ಹೊಸ ವಸ್ತುಗಳನ್ನು ಸಣ್ಣ ಅರಣ್ಯ ಉತ್ಪನ್ನಗಳ ಪಟ್ಟಿಗೆ ಸೇರಿಲು ಶಿಫಾರಸು ಮಾಡಿದೆ.
ಈ ವಸ್ತುಗಳು ಬುಡಕಟ್ಟು ಸಂಗ್ರಹಕಾರರು ಸಂಗ್ರಹಿಸಿದ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಒಳಗೊಂಡಿವೆ. ಬುಡಕಟ್ಟು ಆರ್ಥಿಕತೆಯಲ್ಲಿ 2000 ಕೋಟಿ ರೂಪಾಯಿಗಳ ಒಳಹರಿವಿನೊಂದಿಗೆ, ಸಣ್ಣ ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯು ಬುಡಕಟ್ಟು ಪರಿಸರ ವ್ಯವಸ್ಥೆಯ ಪರಿವರ್ತನೆಗೆ ಮತ್ತು ಬುಡಕಟ್ಟು ಜನರ ಸಬಲೀಕರಣಕ್ಕೆ ಮುನ್ನಡಿ ಬರೆಯುವ ನಿರೀಕ್ಷೆ ಇದೆ.
ರಾಜ್ಯಗಳಲ್ಲಿ, ಛತ್ತೀಸ್ಗಢ 20,270 ಮೆಟ್ರಿಕ್ ಟನ್ ಸಣ್ಣ ಅರಣ್ಯ ಉತ್ಪನ್ನವನ್ನು 52.80 ಕೋಟಿ ರೂಪಾಯಿಗಳಷ್ಟು ನೀಡಿ ಖರೀದಿ ಮಾಡಿ ಇತರ ರಾಜ್ಯಗಳಿಗಿಂತ ಮುನ್ನಡೆ ಸಾಧಿಸಿದೆ. ಛತ್ತೀಸ್ಗಢ ತನ್ನ ಶ್ಲಾಘನೀಯ ಪ್ರಯತ್ನಗಳಿಗಾಗಿ ಚಾಂಪಿಯನ್ ರಾಜ್ಯವಾಗಿ ಹೊರಹೊಮ್ಮಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.