ನವದೆಹಲಿ: ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ರಾಷ್ಟ್ರವು ಸುಮಾರು 60,000 ಹೆಚ್ಚುವರಿ ಹೊಸ ವೆಂಟಿಲೇಟರ್ಗಳನ್ನು ಹೊಂದಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ತಿಳಿಸಿದ್ದಾರೆ ಎಂದು ವರದಿಗಳಾಗಿವೆ.
ಉತ್ತರ ಪ್ರದೇಶದ ಜಾಮ್ ಸಂವಾದ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನಡ್ಡಾ ಈ ಮಾಹಿತಿಯನ್ನು ನೀಡಿದ್ದಾರೆ. ರಾಷ್ಟ್ರದ ವೈದ್ಯಕೀಯ ಮತ್ತು ಆರೋಗ್ಯ ಮೂಲಸೌಕರ್ಯಗಳಿಗೆ ಇದು ಪ್ರಮುಖ ಉತ್ತೇಜನ ನೀಡಲಿದೆ. ಪ್ರಸ್ತುತ ರಾಷ್ಟ್ರವು ಸುಮಾರು 21,000 ಕಾರ್ಯನಿರ್ವಹಿಸುತ್ತಿರುವ ವೆಂಟಿಲೇಟರ್ಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
“ಲಾಕ್ಡೌನ್ ಘೋಷಿಸಿದಾಗ ನಮ್ಮಲ್ಲಿ ಯಾವುದೇ ಮೀಸಲು ಕೋವಿಡ್ ಆಸ್ಪತ್ರೆಗಳು ಇರಲಿಲ್ಲ. ಇಂದು ನಮ್ಮಲ್ಲಿ 1,000 ಮೀಸಲು ಕೋವಿಡ್ ಆಸ್ಪತ್ರೆಗಳು ಮತ್ತು 2 ಲಕ್ಷ ಕೋವಿಡ್ಗೆ ಮೀಸಲಾದ ಹಾಸಿಗೆಗಳಿವೆ. ನಮ್ಮಲ್ಲಿ 21,000 ವೆಂಟಿಲೇಟರ್ಗಳಿವೆ ಮತ್ತು 60,000 ವೆಂಟಿಲೇಟರ್ಗಳು ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ಲಭ್ಯವಾಗಲಿದೆ” ಎಂದು ನಡ್ಡಾ ಹೇಳಿದರು.
ಲಾಕ್ಡೌನ್ ಘೋಷಿಸುವುದಕ್ಕೂ ಮೊದಲು ಭಾರತದಲ್ಲಿ ಪಿಪಿಇ ಕಿಟ್ಗಳ ಉತ್ಪಾದನೆ ಶೂನ್ಯವಾಗಿದ್ದು, ಆದರೆ ಇಂದು ನಮ್ಮ ರಾಷ್ಟ್ರವು ಪ್ರತಿದಿನ 4.5 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್ಗಳನ್ನು ಉತ್ಪಾದಿಸುತ್ತಿದೆ ಎಂದು ಅವರು ಹೇಳಿದರು.
ಪಕ್ಷದ ಕಾರ್ಯಕರ್ತರು ಈವರೆಗೆ 19 ಕೋಟಿ ಆಹಾರ ಪ್ಯಾಕೆಟ್ಗಳನ್ನು ನಿರ್ಗತಿಕರಿಗೆ ಮತ್ತು ದುರ್ಬಲರಿಗೆ ವಿತರಿಸಿದ್ದಾರೆ ಎಂದು ನಡ್ಡಾ ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಸುಮಾರು ಐದು ಕೋಟಿ ಪಡಿತರ ಕಿಟ್ಗಳನ್ನು ವಿತರಿಸಿದ್ದಾರೆ ಎಂದು ಅವರು ಒತ್ತಿಹೇಳಿದ್ದಾರೆ. ಅದರಲ್ಲಿ 45 ಲಕ್ಷ ಕಿಟ್ಗಳನ್ನು ಯುಪಿಯೊಂದರಲ್ಲೇ ವಿತರಣೆ ಮಾಡಲಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.