ನವದೆಹಲಿ: ಭಾರತೀಯ ಸೇನೆಯ ನಾರ್ದನ್ ಕಮಾಂಡ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶನಿವಾರ 16 ಬಿಹಾರ ರೆಜಿಮೆಂಟ್ಗೆ ಸಮರ್ಪಿಸಲ್ಪಟ್ಟ ಸಾಹಸಮಯ ವಿಡಿಯೋ ಅನ್ನು ಹಂಚಿಕೊಂಡಿದೆ. ಗಾಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳ ವಿರುದ್ಧ ಅತ್ಯಂತ ಸಾಹಸಮಯವಾಗಿ ಹೋರಾಡಿದ ಕೀರ್ತಿ 16 ಬಿಹಾರ್ ರೆಜಿಮೆಂಟ್ಗೆ ಸಲ್ಲುತ್ತದೆ.
ಈ ವಿಡಿಯೋವನ್ನು ನಿರ್ಮಿಸಿದ್ದು ಮತ್ತು ಧ್ವನಿ ನೀಡಿದ್ದು ಅಖಿಲ್ ಪ್ರತಾಪ್. 1857 ರಿಂದ ಆರಂಭವಾದ ಬಿಹಾರ್ ರೆಜಿಮೆಂಟ್ನ ಅದ್ಭುತ ಸಾಹಸಮಯ ಇತಿಹಾಸವನ್ನು ಈ ವಿಡಿಯೋ ಪ್ರೇಕ್ಷಕರ ಮುಂದಿಟ್ಟಿದೆ.
ಈ ವಿಡಿಯೋದಲ್ಲಿನ ಕೆಲವೊಂದು ರೋಮಾಂಚನಕಾರಿ ಡೈಲಾಗ್ಗಳು ಈ ಕೆಳಗಿನಂತಿವೆ:
🔹 ಇದು ಹೋರಾಟದಲ್ಲಿನ ಶ್ವಾನದ ಗಾತ್ರವಲ್ಲ, ಶ್ವಾನದಲ್ಲಿನ ಹೋರಾಟದ ಗಾತ್ರ
🔹 ಇಂದು ಸೋಮವಾರ ನಾಳೆ ಮಂಗಳವಾರ ಆಗಲಿದೆ- ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ಮುಖಾಮುಖಿ ನಡೆದಿದ್ದು
🔹 ಅವರೇನು ಮಾಡಬೇಕು ಅದನ್ನು ಮಾಡುತ್ತಾರೆ, ಅವರು ಬಾವಲಿಗಳಲ್ಲ – ಬಾವಲಿ ಪುರುಷರು ಭಜರಂಗ್ ಬಲಿ ಕಿ ಜೈ
ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಅವರು ಚೀನಿ ಪಡೆಗಳಿಂದ ಹತ್ಯೆಯಾದ ಬಳಿಕ ಬಿಹಾರ್ ರೆಜಿಮೆಂಟ್ ಚಿನ್ನಿ ಪಡೆಗಳ ವಿರುದ್ಧ ಮುಗಿಬಿದ್ದ ಸಾಹಸವನ್ನು ಈ ವಿಡಿಯೋ ವಿವರಿಸುತ್ತದೆ.
#IndianArmy #21yearsofKargil
The Saga of #DhruvaWarriors and The Lions of #BiharRegiment.
“Born to fight.They are not the bats. They are the Batman.”
“After every #Monday, there will be a #Tuesday. Bajrang Bali Ki Jai”@adgpi@MajorAkhill #NationFirst pic.twitter.com/lk8beNkLJ7— NorthernComd.IA (@NorthernComd_IA) June 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.