ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾ ಸಿಬ್ಬಂದಿಯ ಮೇಲೆ ಚೀನಾ ಪಡೆ ಅಪ್ರಚೋದಿತ ದಾಳಿ ನಡೆಸಿದ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಬ್ರಹ್ಮೋಸ್-ಎ ಏರ್-ಲಾಂಚ್ಡ್ ಸೂಪರ್ಸಾನಿಕ್ ಕ್ರೂಸ್ ಮಿಸೈಲ್ ಅನ್ನು ಯುದ್ಧದ ಬಳಕೆಗಾಗಿ ಭಾರತವು ಅನುಮೋದಿಸಿದೆ. ಇದು ಭಾರತೀಯ ಮಿಲಿಟರಿ ದೊಡ್ಡ ಮಟ್ಟದ ಶಕ್ತಿಯನ್ನು ತಂದುಕೊಡಲಿದೆ.
ಸೆಂಟರ್ ಫಾರ್ ಮಿಲಿಟರಿ ಏರ್ ವರ್ಥಿನೆಸ್ ಆಂಡ್ ಸರ್ಟಿಫಿಕೇಶನ್ (ಸಿಇಎಂಎಎಲ್ಎಸಿ), ಡಿಆರ್ಡಿಓ ಕ್ಷಿಪಣಿಗೆ ಫ್ಲೀಟ್ ರಿಲೀಸ್ ಕ್ಲಿಯರೆನ್ಸ್ ನೀಡಿದೆ. ಇದು ಶಸ್ತ್ರವನ್ನು ಯುದ್ಧಕ್ಕೆ ಬಳಸುವುದಕ್ಕೆ ಇರುವ ಕೊನೆಯ ಹಂತವಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಶತ್ರು ಪ್ರದೇಶಕ್ಕೆ ತಲುಪಿಸಲು ಸುಖೋಯ್ ಸು -30 ಎಂಕೆಐನಲ್ಲಿ ನಿಯೋಜಿಸಲಾಗುತ್ತದೆ. ಕ್ಷಿಪಣಿಯನ್ನು ಸೇರಿಸಲು ಕೆಲವು ಸುಖೋಯಿಗಳನ್ನು ಈಗಾಗಲೇ ಮಾರ್ಪಡಿಸಲಾಗಿದೆ. ಹೆಚ್ಚಿನ ಜೆಟ್ಗಳನ್ನು ಸಜ್ಜುಗೊಳಿಸುವ ಯೋಜನೆಗಳೊಂದಿಗೆ ಈ ಕಾರ್ಯ ನಡೆದಿದೆ ಎನ್ನಲಾಗಿದೆ.
ಬ್ರಹ್ಮೋಸ್-ಎ ಕ್ಷಿಪಣಿ 300 ಕಿ.ಮೀ ಮತ್ತು 400 ಕಿ.ಮೀ ಕಾರ್ಯಾಚರಣೆಯ ವ್ಯಾಪ್ತಿಯನ್ನು ಹೊಂದಿದೆ ಮತ್ತು 1,640 ರಿಂದ 46,000 ಅಡಿಗಳವರೆಗೆ ಯಾವುದೇ ಎತ್ತರದಲ್ಲಿ ಇದನ್ನು ಲಾಂಚ್ ಮಾಡಬಹುದು. ವಿಶ್ವದ ಅತಿ ವೇಗದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಇದಾಗಿದ್ದು, ಇದು ಗಂಟೆಗೆ 3,000 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು.
ಸಾಂಪ್ರದಾಯಿಕ ಸಿಡಿತಲೆ ಹೊಂದಿರುವ ಕ್ಷಿಪಣಿ ದೃಢ ಕಮಾಂಡ್, ನಿಯಂತ್ರಣ ಮತ್ತು ಸಂವಹನ ಕೇಂದ್ರಗಳನ್ನು ಭೇದಿಸಬಲ್ಲದು. ರೈಲ್ವೆ ಮಾರ್ಗಗಳಂತಹ ಮಿಲಿಟರಿ ಮತ್ತು ಕಾರ್ಯತಂತ್ರದ ಗುರಿಗಳನ್ನು ನಾಶಮಾಡಲು ಇದನ್ನು ಪರಿಣಾಮಕಾರಿಯಾಗಿ ಬಳಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.