ನವದೆಹಲಿ: ಗಡಿ ಭದ್ರತಾ ಪಡೆ (ಬಿಎಸ್ಎಫ್) ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಕತುವಾ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿಯ ಸಮೀಪ ಪಾಕಿಸ್ಥಾನದ ಡ್ರೋನ್ ಅನ್ನು ಹೊಡೆದುರುಳಿಸಿದೆ. ಇದರಲ್ಲಿ ಶಸ್ತ್ರಾಸ್ತ್ರಗಳನ್ನು ತುಂಬಿಸಿ ಪಾಕಿಸ್ಥಾನವು ಭಾರತಕ್ಕೆ ಕಳುಹಿಸಿತ್ತು ಎಂದು ವರದಿಗಳು ತಿಳಿಸಿವೆ.
ಈ ಡ್ರೋನ್, ಯುನೈಟೆಡ್ ಸ್ಟೇಟ್ಸ್ (ಯುಎಸ್) ನಿರ್ಮಿತ ಎಂ -4 ಅರೆ-ಸ್ವಯಂಚಾಲಿತ ರೈಫಲ್ ಅದರಲ್ಲಿ 64 ಸುತ್ತುಗಳ ಗುಂಡು, ಎರಡು ಮ್ಯಾಗಝೀನ್ ಮತ್ತು ಏಳು ಎಂ 67 ಗ್ರೆನೇಡ್ಗಳನ್ನು ಹೊಂದಿತ್ತು ಎಂದು ತಿಳಿದು ಬಂದಿದೆ.
ಕತುವಾ ಜಿಲ್ಲೆಯ ರಾತುವಾ ಪ್ರದೇಶದ ಹಿರಾನಗರ್ ಸೆಕ್ಟರ್ ಒಳಗೆ ಡ್ರೋನ್ ಹಾರಾಟ ನಡೆಸುತ್ತಿದ್ದಾಗ ಅದನ್ನು ಹೊಡೆದುರುಳಿಸಲಾಯಿತು. ಗುಂಡು ಹಾರಿಸಿದ ನಂತರ ಡ್ರೋನ್ ಜೂನ್ 20ರ ಬೆಳಿಗ್ಗೆ 5.10 ರ ಸುಮಾರಿಗೆ ಮೈದಾನದಲ್ಲಿ ಬಿದ್ದಿತು ಎಂದು ವರದಿಗಳು ತಿಳಿಸಿವೆ.
ಡ್ರೋನ್ 17.5 ಕಿಲೋಗ್ರಾಂಗಳಷ್ಟು ಭಾರವಿತ್ತು ಮತ್ತು ಅದಕ್ಕೆ ಜೋಡಿಸಲಾದ ಶಸ್ತ್ರಾಸ್ತ್ರಗಳ ಸಾಗಣೆಯು ಐದರಿಂದ ಆರು ಕಿಲೋಗ್ರಾಂಗಳಷ್ಟು ಭಾರವಿತ್ತು ಎನ್ನಲಾಗಿದೆ. ಶಸ್ತ್ರಾಸ್ತ್ರಗಳನ್ನು ಯಾರಿಗೆ ತಲುಪಿಸಲಾಗುತ್ತಿತ್ತು ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ.
ಡ್ರೋನ್ನ ಪ್ಲೇಲೋಡ್ನಲ್ಲಿ “ಅಲಿ ಭಾಯ್” ಎಂದು ಬರೆಯಲಾಗಿತ್ತು ಎನ್ನಲಾಗಿದೆ.
Jammu & Kashmir: At about 5:10 am, a Pakistani spy drone was shot down by Border Security Force (BSF) personnel in Pansar, Kathua. pic.twitter.com/cnLiFwUEy3
— ANI (@ANI) June 20, 2020
Jammu & Kashmir: Weapons recovered from the Pakistani drone shot down by Border Security Force (BSF) personnel in Kathua today. https://t.co/GP0wTMvGCU pic.twitter.com/R1Hl0Ah4Kp
— ANI (@ANI) June 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.